alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ಪನ ರಿವಾಲ್ವರ್ ನಿಂದ್ಲೇ ಗುಂಡು ಹಾರಿಸಿಕೊಂಡು ಟೆಕ್ಕಿ ಸಾವು

ಖಿನ್ನತೆಯಿಂದ ಬಳಲುತ್ತಿದ್ದ 35 ವರ್ಷದ ಟೆಕ್ಕಿ ಪುಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ತಂದೆಯ ರಿವಾಲ್ವರ್ ನಿಂದ್ಲೇ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ. ಬೆಳಗ್ಗೆ 8.30ರ ವೇಳೆಗೆ ಅಪಾರ್ಟ್ಮೆಂಟ್ ನ ಸ್ನಾನದ ಕೋಣೆಯಲ್ಲಿ ಟೆಕ್ಕಿ ಶವ ಪತ್ತೆಯಾಗಿದೆ.

ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಟೆಕ್ಕಿ ಸೂಸೈಡ್ ನೋಟ್ ಕೂಡ ಬರೆದಿಟ್ಟಿದ್ದಾನೆ. ಮೃತ ಟೆಕ್ಕಿ ವಾಸುದೇವ್ ಯಾದವ್ ತಂದೆ ಥಾಣೆಯಲ್ಲಿ ಲ್ಯಾಂಡ್ ಡೆವಲಪರ್. ಮಗ ತಮ್ಮ ರಿವಾಲ್ವರ್ ತೆಗೆದುಕೊಂಡಿದ್ದಾನೆ ಅನ್ನೋದು ಅವರಿಗೆ ಗೊತ್ತೇ ಇರಲಿಲ್ಲ.

ಹಿಂಜೆವಾಡಿಯಲ್ಲಿರೋ ಸಾಫ್ಟ್ ವೇರ್ ಕಂಪನಿಯಲ್ಲಿ ಯಾದವ್ ಉನ್ನತ ಹುದ್ದೆಯಲ್ಲಿದ್ದ. ಎರಡು ವರ್ಷದ ಹಿಂದೆಷ್ಟೆ ಪತ್ನಿಯಿಂದ ದೂರವಾಗಿದ್ದ ಆತ ವಿಚ್ಛೇದನವನ್ನೂ ಪಡೆದಿದ್ದ. ವಿಚ್ಛೇದನದ ಬಳಿಕ ಖಿನ್ನತೆಗೆ ಒಳಗಾಗಿದ್ದ ಯಾದವ್, ಅದಕ್ಕೆ ಚಿಕಿತ್ಸೆಯನ್ನೂ ಪಡೆಯುತ್ತಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...