alex Certify
ಕನ್ನಡ ದುನಿಯಾ       Mobile App
       

Kannada Duniya

ಉದ್ಯೋಗ ಸಿಗದೆ ಖಿನ್ನತೆಗೊಳಗಾದ ವ್ಯಕ್ತಿ ಆತ್ಮಹತ್ಯೆ

ಕೆಲಸ ಸಿಕ್ಕಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಹೈದ್ರಾಬಾದ್ ನಲ್ಲಿ ನಡೆದಿದೆ. ಈ ವ್ಯಕ್ತಿ ಸಾವಿಗೂ ಮುನ್ನ ಮೊಬೈಲ್ ನಲ್ಲಿ ತನ್ನ ಸಾವಿನ ಬಗ್ಗೆ ವಿಡಿಯೋ ರೆಕಾರ್ಡಿಂಗ್ ಮಾಡಿ, ನಂತರ ನೇಣು ಹಾಕಿಕೊಂಡಿದ್ದಾನೆ.

21 ವರ್ಷದ ಈ ಯುವಕ ಕೆಲಸ ಸಿಗದ ಹಿನ್ನೆಲೆಯಲ್ಲಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ. ಸರೋನಗರದಲ್ಲಿ ಸ್ನೇಹಿತರೊಂದಿಗೆ ಬಾಡಿಗೆ ರೂಮಿನಲ್ಲಿ ವಾಸವಿದ್ದ ಈತ, ಅವರು ಇಲ್ಲದಾಗ ರಾತ್ರಿ ಫ್ಯಾನ್ ಗೆ ನೇಣು ಹಾಕಿಕೊಂಡಿದ್ದಾನೆ. ನಂತರ ಬಂದು ನೋಡುವಷ್ಟರಲ್ಲಿ ಆತನ ಶವ ಫ್ಯಾನ್ ನಲ್ಲಿ ನೇತಾಡುತ್ತಿತ್ತು ಅಂತಾ ಪೊಲೀಸರು ತಿಳಿಸಿದ್ದಾರೆ.

ಸಾವಿಗೂ ಮುನ್ನ ಈ ವ್ಯಕ್ತಿ ಕುರ್ಚಿ ಏರಿ ಫ್ಯಾನಿಗೆ ನೇಣು ಹಾಕಿಕೊಳ್ತುತ್ತಿರುವುದು ಮತ್ತು ಜೀವವನ್ನು ಅಂತ್ಯಗೊಳಿಸಿಕೊಳ್ಳುತ್ತಿದ್ದೇನೆ ಅಂತಾ ಹೇಳಿರುವುದು, ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಆಗಿದೆ. ಇನ್ನು ಈತನ ರೂಮಿನಲ್ಲಿದ್ದ ಯುವಕರು, ತಮ್ಮ ಸ್ನೇಹಿತನ ಸಾವಿಗೆ ನಿಖರ ಕಾರಣ ತಿಳಿಸಿಲ್ಲ. ಉದ್ಯೋಗಕ್ಕಾಗಿ ಹಲವಾರು ಸಂದರ್ಶನಗಳಲ್ಲಿ ಭಾಗವಹಿಸಿದ್ದ. ಆದ್ರೆ ಉದ್ಯೋಗ ಪಡೆಯುವಲ್ಲಿ ಆತ ಯಶಸ್ವಿಯಾಗಲಿಲ್ಲ. ಹೀಗಾಗಿ ಆತ ಮಾನಸಿಕ ಒತ್ತಡಕ್ಕೊಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...