alex Certify
ಕನ್ನಡ ದುನಿಯಾ       Mobile App
       

Kannada Duniya

ವಿನಾಕಾರಣ ಪತಿಯೊಂದಿಗೆ ಲೈಂಗಿಕ ಸಂಬಂಧಕ್ಕೆ ಒಲ್ಲೆ ಎಂದರೆ ಜೋಕೆ..!

divorceಯಾವುದೇ ಸಮರ್ಥ ಕಾರಣಗಳಿಲ್ಲದೆ ದೀರ್ಘಕಾಲದವರೆಗೆ ಪತಿಯೊಂದಿಗೆ ಲೈಂಗಿಕ ಸಂಬಂಧ ಹೊಂದಲು ನಿರಾಕರಿಸುವುದು ಮಾನಸಿಕ ಕ್ರೌರ್ಯ ಮತ್ತು ವಿಚ್ಛೇದನಕ್ಕೂ ಮೂಲವಾಗಬಲ್ಲದು ಅಂತಾ ದೆಹಲಿ ಹೈಕೋರ್ಟ್ ಹೇಳಿದೆ.

ಮದುವೆಯಾಗಿ ನಾಲ್ಕೂವರೆ ವರ್ಷಗಳಾಗಿದೆ, ಪತ್ನಿಯಲ್ಲಿ ಯಾವುದೇ ದೈಹಿಕ ನ್ಯೂನ್ಯತೆಗಳಿಲ್ಲ. ಆದ್ರೂ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಲು ನಿರಾಕರಿಸುತ್ತಿದ್ದು, ವಿಚ್ಛೇದನ ಕೊಡಿ ಅಂತಾ ನೊಂದ ಪತಿಯೊಬ್ಬ ಕೋರ್ಟ್ ಮೆಟ್ಟಿಲೇರಿದ್ದ. ಟ್ರಯಲ್ ಕೋರ್ಟ್ ತೀರ್ಪು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ. 2001 ರ ನವೆಂಬರ್ 26ರಂದು ಹರಿಯಾಣದಲ್ಲಿ ಅವರ ಮದುವೆ ನಡೆದಿದೆ. 2013ರಲ್ಲಿ ಅವರು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದು, ದಂಪತಿಗೆ 10 ಹಾಗೂ 9 ವರ್ಷದ ಇಬ್ಬರು ಗಂಡು ಮಕ್ಕಳಿದ್ರು.

ಆಕೆ ವಿನಾಕಾರಣ ತನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಲು ಒಪ್ಪುತ್ತಿಲ್ಲ, ಜೊತೆಗೆ ಮನೆಗೆಲಸವನ್ನೂ ಮಾಡದೆ ತನ್ನ ಕುಟುಂಬದವರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾಳೆಂದು ಪತಿ ದೂರಿದ್ದಾನೆ. ಅರ್ಜಿ ವಿಚಾರಣೆ ನಡೆಸಿದ ಜಸ್ಟಿಸ್ ನಂದ್ರಜೋಗ್ ಮತ್ತು ಪ್ರತಿಭಾ ರಾಣಿ ಅವರಿದ್ದ ಪೀಠ, ವಿನಾಕಾರಣ ಪತಿಯೊಂದಿಗೆ ಲೈಂಗಿಕ ಸಂಬಂಧ ಹೊಂದಲು ನಿರಾಕರಿಸುವುದು ಮಾನಸಿಕ ಕ್ರೌರ್ಯಕ್ಕೆ ಸಮನಾದುದು ಹಾಗಾಗಿ ಪತಿಯ ಪರವಾಗಿ ವಿಚ್ಛೇದನ ತೀರ್ಪು ನೀಡುತ್ತಿರುವುದಾಗಿ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...