alex Certify
ಕನ್ನಡ ದುನಿಯಾ       Mobile App
       

Kannada Duniya

ಬೈಕ್ ನಲ್ಲಿ ಪತ್ನಿಯ ಶವ ಸಾಗಿಸಿದ ಅಸಹಾಯಕ ಪತಿ

denied-mortuary-van-bihar-man-carries-wifes-body-home-on-motorcycleಒಡಿಶಾದ ದಾನಾ ಮಾಂಜಿ ಪ್ರಕರಣವನ್ನು ನೆನಪಿಸುವಂತಹ ಮತ್ತೊಂದು ಘಟನೆ ಬಿಹಾರದಲ್ಲಿ ನಡೆದಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟ ತನ್ನ ಪತ್ನಿಯ ಶವವನ್ನು ಗ್ರಾಮಕ್ಕೆ ತೆಗೆದುಕೊಂಡು ಹೋಗಲು ವಾಹನ ಲಭ್ಯವಾಗದ ಕಾರಣ ಆಕೆಯ ಪತಿ, ಮಗನೊಂದಿಗೆ ಬೈಕ್ ನಲ್ಲಿ ಪತ್ನಿಯ ಶವವನ್ನು ತೆಗೆದುಕೊಂಡು ಹೋಗಿದ್ದಾನೆ.

ಇಂತದೊಂದು ಮನ ಕಲಕುವ ಘಟನೆ ಬಿಹಾರದ ಪುರ್ನಿಯಾ ಜಿಲ್ಲೆಯಲ್ಲಿ ನಡೆದಿದೆ. 60 ವರ್ಷದ ಶಂಕರ್ ಸಾ ಎಂಬಾತನ ಪತ್ನಿ 50 ವರ್ಷದ ಸುಶೀಲಾ ದೇವಿ ಅನಾರೋಗ್ಯಕ್ಕೊಳಗಾಗಿ ಪುರ್ನಿಯಾದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಳು.

ಶಂಕರ್ ಸಾ ಮತ್ತಾತನ ಪುತ್ರ 32 ವರ್ಷದ ಪಪ್ಪು, ಪಂಜಾಬ್ ನಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಸುಶೀಲಾ ದೇವಿ ಆಸ್ಪತ್ರೆಗೆ ದಾಖಲಾದ ವಿಷಯ ತಿಳಿದು ತವರಿಗೆ ವಾಪಸ್ಸಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸುಶೀಲಾ ದೇವಿ ಸಾವನ್ನಪ್ಪಿದ್ದು, ತಂದೆ-ಮಗ ಶವ ಸಾಗಿಸಲು ವಾಹನ ವ್ಯವಸ್ಥೆ ಕಲ್ಪಿಸುವಂತೆ ಆಸ್ಪತ್ರೆಯವರಿಗೆ ಮನವಿ ಮಾಡಿದ್ದಾರೆ.

ಆದರೆ ಆಸ್ಪತ್ರೆಯಲ್ಲಿ ಈ ಸೌಲಭ್ಯವಿಲ್ಲವೆಂದು ಹೇಳಿದ ಸಿಬ್ಬಂದಿ, ಸ್ವಂತ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಅಂಬುಲೆನ್ಸ್ ಗೆ ವಿಚಾರಿಸಿದಾಗ ಚಾಲಕ 2,500 ರೂ. ನೀಡುವಂತೆ ಹೇಳಿದ್ದಾನೆ. ಆದರೆ ಅಷ್ಟೊಂದು ಹಣ ಹೊಂದಿಸಲು ಸಾಧ್ಯವಾಗದ ಅಪ್ಪ-ಮಗ ಬೈಕ್ ನಲ್ಲೇ ಸುಶೀಲಾ ದೇವಿಯ ಶವವನ್ನು ಗ್ರಾಮಕ್ಕೆ ಕೊಂಡೊಯ್ದಿದ್ದಾರೆ.

ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಜಿಲ್ಲಾಡಳಿತ ಇದೀಗ ತನಿಖೆಗೆ ಆದೇಶಿಸಿದೆ. ಪುರ್ನಿಯಾ ಸರ್ಕಾರಿ ಆಸ್ಪತ್ರೆ ವೈದ್ಯರು ನಮ್ಮಲ್ಲಿ ಶವ ಸಾಗಾಣೆ ವಾಹನ ಲಭ್ಯವಿರದ ಕಾರಣ ವ್ಯವಸ್ಥೆ ಮಾಡಲಾಗಲಿಲ್ಲವೆಂದು ಸಮರ್ಥಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...