alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್! ಉಪ ಕುಲಪತಿ ಕಚೇರಿಗೆ ಬೆಂಕಿ ಹಚ್ಚಿದ ವಿದ್ಯಾರ್ಥಿ

ಅಹಮದಾಬಾದ್: ಪದವಿ ಪ್ರಮಾಣ ಪತ್ರ ಕೊಡಲು ಸತಾಯಿಸಿದ್ದರಿಂದ ಆಕ್ರೋಶಗೊಂಡ ವಿದ್ಯಾರ್ಥಿಯೊಬ್ಬ, ವಿಶ್ವವಿದ್ಯಾಲಯದ ಉಪ ಕುಲಪತಿ ಕಚೇರಿಗೆ ಬೆಂಕಿ ಹಚ್ಚಿದ ಘಟನೆ ಗುಜರಾತ್ ನಲ್ಲಿ ನಡೆದಿದೆ.

ವಡೋದರಾದ ಮಹಾರಾಜ್ ಸಯ್ಯಾಜಿರಾವ್ ವಿಶ್ವವಿದ್ಯಾಲಯದಲ್ಲಿ ಹಿರಿಯ ವಿದ್ಯಾರ್ಥಿಯೊಬ್ಬ ಇಂತಹ ಕೃತ್ಯವೆಸಗಿದ್ದಾನೆ. 2007 ರಲ್ಲಿ ವಿದ್ಯಾರ್ಥಿ ಪದವಿ ಪೂರ್ಣಗೊಳಿಸಿದ್ದರೂ, ಆತನಿಗೆ ಸರ್ಟಿಫಿಕೇಟ್ ನೀಡಿರಲಿಲ್ಲ.

ವಿಶ್ವವಿದ್ಯಾಲಯ ಕಚೇರಿಗೆ ಅಲೆದು, ಅಲೆದು ಸಾಕಾಗಿ ಹೋಗಿದ್ದ ಆತ, ಉಪ ಕುಲಪತಿ ಕಚೇರಿಗೆ ಬೆಂಕಿ ಹಚ್ಚಿದ್ದಾನೆ. ಇದರಿಂದಾಗಿ ಅಪಾರ ಪ್ರಮಾಣದ ದಾಖಲೆ ಪತ್ರಗಳೆಲ್ಲಾ ಸುಟ್ಟು ಹೋಗಿವೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.

ಕೃತ್ಯವೆಸಗಿದ ವಿದ್ಯಾರ್ಥಿ ಬೆತ್ತಲೆಯಾಗಿ ದೇವತೆಗಳ ಚಿತ್ರಗಳನ್ನು ಬರೆದಿದ್ದ ಕಾರಣ ಪದವಿ ಪ್ರಮಾಣ ಪತ್ರ ನೀಡಿರಲಿಲ್ಲ. ಇದರಿಂದಾಗಿ ಆತ ಬೆಂಕಿ ಹಚ್ಚಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...