alex Certify
ಕನ್ನಡ ದುನಿಯಾ       Mobile App
       

Kannada Duniya

ಚಪಾತಿ ಒಲ್ಲದ ಪತಿ ಆತ್ಮಹತ್ಯೆಗೆ ಶರಣು

dal jeera rice

ತನ್ನ ಪತ್ನಿ ತಾನು ಬಯಸಿದ ಜೀರಾ ರೈಸ್, ದಾಲ್ ಪ್ರೈ ಮಾಡುವ ಬದಲಿಗೆ ಚಪಾತಿ ಹಾಗೂ ತರಕಾರಿ ಪಲ್ಯ ಮಾಡಿದ್ದರಿಂದ ಸಿಟ್ಟಿಗೆದ್ದ ಪತಿಯೊಬ್ಬ ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ನರೋಡಾದ ಹೌಡಾ ಹೌಸಿಂಗ್ ಕಾಲೋನಿ ನಿವಾಸಿ 30 ವರ್ಷದ ದಿನೇಶ್ ಆತ್ಮಹತ್ಯೆ ಮಾಡಿಕೊಂಡವನಾಗಿದ್ದು, ಏಪ್ರಿಲ್ 12 ರಂದು ಮದ್ಯಪಾನ ಮಾಡಿಕೊಂಡು ಮನೆಗೆ ಬಂದ ದಿನೇಶ್, ತನ್ನ ಪತ್ನಿಗೆ ಜೀರಾ ರೈಸ್ ಮಾಡುವಂತೆ ಹೇಳಿದ್ದಾನೆ.

ಆದರೆ ಅಷ್ಟರಲ್ಲಾಗಲೇ ಆಕೆ ಚಪಾತಿ ಹಾಗೂ ತರಕಾರಿ ಪಲ್ಯ ಮಾಡಿಟ್ಟಿದ್ದ ಕಾರಣ ಜೀರಾ ರೈಸ್ ಮಾಡಲು ನಿರಾಕರಿಸಿದ್ದಾಳೆ. ಕೋಪಗೊಂಡ ದಿನೇಶ್ ತನ್ನ ಕೋಣೆಗೆ ಹೋಗಿ ಕದವಿಕ್ಕಿಕೊಂಡಿದ್ದಾನೆ. ಸ್ವಲ್ಪ ಸಮಯದ ಬಳಿಕ ಕೋಣೆಯಿಂದ ಹೊಗೆ ಬರಲಾರಂಭಿಸಿದ್ದು, ಬಾಗಿಲು ಹೊಡೆದು ನೋಡಿದ ವೇಳೆ ದಿನೇಶ್ ಬೆಂಕಿ ಹಚ್ಚಿಕೊಂಡಿರುವುದು ಕಂಡು ಬಂದಿದೆ, ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಜೀವನ್ಮರಣದ ಹೋರಾಟ ನಡೆಸಿದ್ದ ಆತ ಶನಿವಾರ ಸಾವನ್ನಪ್ಪಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...