alex Certify
ಕನ್ನಡ ದುನಿಯಾ       Mobile App
       

Kannada Duniya

15 ದಿನದ ಡೆಂಘಿ ಚಿಕಿತ್ಸೆಗೆ 16 ಲಕ್ಷ ಬಿಲ್, ಆದ್ರೂ ಬದುಕಲಿಲ್ಲ ಬಾಲಕಿ

ಡೆಂಘಿ ಜ್ವರದಿಂದ ಬಳಲುತ್ತಿದ್ದ 7 ವರ್ಷದ ಬಾಲಕಿಯನ್ನು ಗುರ್ಗಾಂವ್ ನ ಫೋರ್ಟಿಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 15 ದಿನ ಬಾಲಕಿಯನ್ನು ಐಸಿಯುನಲ್ಲಿಟ್ಟಿದ್ದ ಆಸ್ಪತ್ರೆಯ ವೈದ್ಯರು 16 ಲಕ್ಷ ರೂಪಾಯಿ ಬಿಲ್ ಮಾಡಿದ್ದಾರೆ. ಆದ್ರೆ ಬಾಲಕಿ ಮೃತಪಟ್ಟಿದ್ದಾಳೆ.

ಬೇರೊಂದು ಆಸ್ಪತ್ರೆಗೆ ಶಿಫ್ಟ್ ಮಾಡುವ ಸಂದರ್ಭದಲ್ಲಿ ಆದ್ಯ ಕೊನೆಯುಸಿರೆಳೆದಿದ್ದಾಳೆ. ಫೋರ್ಟಿಸ್ ಆಸ್ಪತ್ರೆಯ ಸುಲಿಗೆ ಬಗ್ಗೆ ಆದ್ಯಾಳ ತಂದೆಯ ಸ್ನೇಹಿತರೊಬ್ಬರು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದರು. 2700 ಗ್ಲೌಸ್ ಗಳ ಮೊತ್ತವನ್ನೂ ಸೇರಿಸಿ 15 ದಿನಗಳಿಗೆ ಫೋರ್ಟಿಸ್ 16 ಲಕ್ಷ ರೂ. ಬಿಲ್ ಮಾಡಿದೆ ಅಂತಾ ಆಕ್ರೋಶ ಹೊರಹಾಕಿದ್ದರು.

ಈ ಟ್ವೀಟ್ ಗೆ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು. 9000ಕ್ಕೂ ಹೆಚ್ಚು ಬಾರಿ ಇದನ್ನು ರಿಟ್ವೀಟ್ ಮಾಡಲಾಗಿತ್ತು. ಸಾಮಾಜಿಕ ತಾಣಗಳಲ್ಲಿ ಸುದ್ದಿಯಾಗುತ್ತಿದ್ದಂತೆ ಈ ಬಗ್ಗೆ ಆರೋಗ್ಯ ಸಚಿವ ಜೆಪಿ ನಡ್ಡಾ ಕೂಡ ಪ್ರತಿಕ್ರಿಯಿಸಿದ್ದಾರೆ. ತನಿಖೆ ನಡೆಸುವುದಾಗಿ ಆದ್ಯಾಳ ಫೋಷಕರಿಗೆ ಭರವಸೆ ನೀಡಿದ್ದಾರೆ.

ಆದ್ರೆ ಫೋರ್ಟಿಸ್ ಆಸ್ಪತ್ರೆ ಮಾತ್ರ ಬಿಲ್ಲಿಂಗ್ ನಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಅಂತಾ ವಾದಿಸಿದೆ. ಆಗಸ್ಟ್ 27ರಂದು ಆದ್ಯಾಗೆ ಜ್ವರ ಕಾಣಿಸಿಕೊಂಡಿತ್ತು. ಮೊದಲು ಅವಳನ್ನು ರಾಕ್ ಲ್ಯಾಂಡ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ಮೂರ್ನಾಲ್ಕು ದಿನ ಕಳೆದ್ರೂ ಜ್ವರ ಕಡಿಮೆಯಾಗದೇ ಇದ್ದಿದ್ರಿಂದ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಯ್ತು.

15 ದಿನಗಳ ಕಾಲ ಫೋರ್ಟಿಸ್ ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ನೀಡಲಾಗಿದೆ. ಆದ್ರೆ ಅವಳನ್ನು ಬದುಕಿಸಲು ವೈದ್ಯರು ವಿಫಲರಾಗಿದ್ದಾರೆ. ಬಿಲ್ ನಲ್ಲಿ ಸಾವಿರಾರು ಗ್ಲೌಸ್, 600ಕ್ಕೂ ಹೆಚ್ಚು ಸಿರೆಂಜ್ ಸೇರಿದಂತೆ ಇತರ ಔಷಧಗಳನ್ನು ಬಳಸಿರುವುದಾಗಿ ನಮೂದಿಸಿ 16 ಲಕ್ಷ ರೂಪಾಯಿ ಕೊಡುವಂತೆ ಸೂಚಿಸಲಾಗಿದೆ. ಆದ್ರೆ ಅವನ್ನೆಲ್ಲ ಆಸ್ಪತ್ರೆಯವರು ಬಳಸಿಯೇ ಇಲ್ಲ ಅಂತಾ ಆದ್ಯಾ ಪೋಷಕರು ಹೇಳ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...