alex Certify
ಕನ್ನಡ ದುನಿಯಾ       Mobile App
       

Kannada Duniya

”2 ಸಾವಿರದ ನೋಟನ್ನು ಕಡಿಮೆ ಮುದ್ರಿಸಿ”

baba-ramdev-1

ನೋಟು ನಿಷೇಧದ ನಂತ್ರ ಇದೇ ಮೊದಲ ಬಾರಿ ಯೋಗ ಗುರು ಬಾಬಾ ರಾಮದೇವ್ ಈ ಬಗ್ಗೆ ಮಾತನಾಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾರ್ಯವನ್ನು ಶ್ಲಾಘಿಸಿದ್ದಾರೆ. ಇದರ ಜೊತೆಗೆ 2 ಸಾವಿರ ರೂಪಾಯಿ ಮುಖ ಬೆಲೆಯ ನೋಟುಗಳನ್ನು ಕಡಿಮೆ ಪ್ರಮಾಣದಲ್ಲಿ ಮುದ್ರಿಸುವಂತೆ ಕೋರಿದ್ದಾರೆ.

2 ಸಾವಿರ ರೂಪಾಯಿ ನೋಟುಗಳನ್ನು ಕಡಿಮೆ ಪ್ರಮಾಣದಲ್ಲಿ ಮುದ್ರಿಸಿ, ಇಲ್ಲವೆ ಮುಂದಿನ ದಿನಗಳಲ್ಲಿ ಇದನ್ನು ನಿಲ್ಲಿಸಿಬಿಡಿ ಎಂದು ಮೋದಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 2 ಸಾವಿರ ಮುಖಬೆಲೆಯ ನೋಟುಗಳಿಂದ ಭ್ರಷ್ಟಾಚಾರ ಹೆಚ್ಚಾಗಲಿದೆ ಎಂದಿದ್ದಾರೆ.

ಈ ನಿರ್ಧಾರವನ್ನು ವಿರೋಧಿಸಿದವರ ವಿರುದ್ಧವೂ ಬಾಬಾ ರಾಮದೇವ್ ಮಾತನಾಡಿದ್ದಾರೆ. ಈ ನಿರ್ಧಾರ ವಿರೋಧ ಮಾಡುವುದು ದೇಶದ್ರೋಹಕ್ಕೆ ಸಮ. ಯಾರು ಈ ನಿರ್ಧಾರವನ್ನು ವಿರೋಧಿಸುತ್ತಿದ್ದಾರೋ ಅವರು ದೇಶದ್ರೋಹವೆಸಗುತ್ತಿದ್ದಾರೆ. ನೋಟು ನಿಷೇಧದಿಂದಾಗಿ ಆತಂಕವಾದಿಗಳಿಗೆ ಹೋಗ್ತಿದ್ದ ಹಣ ಬಂದ್ ಆಗಿದೆ. ಆತಂಕವಾದಿಗಳಿಗೆ ಇದರಿಂದ ಬಹಳ ದೊಡ್ಡ ನಷ್ಟವಾಗಿದೆ ಎಂದಿದ್ದಾರೆ ಬಾಬಾ ರಾಮದೇವ್. ನೋಟು ನಿಷೇಧದಿಂದಾಗಿ ಬ್ಯಾಂಕ್ ಬಡ್ಡಿದರ ಕೂಡ ಕಡಿಮೆಯಾಗಲಿದ್ದು, ಪಾಕಿಸ್ತಾನದಿಂದ ಬರುವ ನಕಲಿ ನೋಟಿಗೂ ತಡೆ ಬೀಳಲಿದೆ ಎಂದು ಯೋಗಗುರು ಅಭಿಪ್ರಾಯಪಟ್ಟಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...