alex Certify
ಕನ್ನಡ ದುನಿಯಾ       Mobile App
       

Kannada Duniya

ತಿಮ್ಮಪ್ಪನ ಹುಂಡಿ ಸೇರ್ತಿದೆ ಕೋಟಿ ಕೋಟಿ ಹಳೆ ನೋಟು

hundi

ಕೇಂದ್ರ ಸರ್ಕಾರ 500 ಮತ್ತು 1000 ರೂಪಾಯಿ ನೋಟು ನಿಷೇಧ ಮಾಡಿ 2 ತಿಂಗಳುಗಳೇ ಕಳೆದಿವೆ. ಹಳೆ ನೋಟು ಬದಲಾವಣೆ ನೀಡಿದ್ದ ಕಾಲಾವಕಾಶ ಮುಗಿದು ಎರಡು ವಾರವಾಗುತ್ತಾ ಬಂತು. ಆದ್ರೂ ತಿರುಪತಿ ತಿಮ್ಮಪ್ಪನ ಹುಂಡಿಗೆ ಮಾತ್ರ ನಿಷೇಧಿತ ಹಳೆ ನೋಟುಗಳು ಬಂದು ಬೀಳುತ್ತಲೇ ಇವೆ.

ಕಳೆದ 11 ದಿನಗಳಲ್ಲಿ ತಿಮ್ಮಪ್ಪನ ಹುಂಡಿಗೆ ಭಕ್ತರು ಕಾಣಿಕೆ ರೂಪದಲ್ಲಿ 1.7 ಕೋಟಿ ರೂಪಾಯಿ ಹಳೆ ನೋಟುಗಳನ್ನು ಹಾಕಿದ್ದಾರೆ. ಡಿಸೆಂಬರ್ 31ರಂದು ಅತಿ ಹೆಚ್ಚು ಅಂದ್ರೆ ಒಂದೇ ದಿನ 44 ಲಕ್ಷ ರೂಪಾಯಿ ಹಳೆ ನೋಟುಗಳು ಹುಂಡಿಯಲ್ಲಿ ಸಂಗ್ರಹವಾಗಿವೆ.

ಹಳೆ ನೋಟು ಬದಲಾವಣೆಗೆ ಸರ್ಕಾರ ನೀಡಿದ್ದ ಗಡುವು ಡಿಸೆಂಬರ್ 31ಕ್ಕೆ ಅಂತ್ಯವಾಗಿತ್ತು, ಹಾಗಾಗಿ ಆ ದಿನ ಕಾಣಿಕೆ ರೂಪದಲ್ಲಿ ಹೆಚ್ಚು ಹಳೆ ನೋಟುಗಳು ಬಂದಿವೆ. ಹೊಸವರ್ಷದ ದಿನ ಜನವರಿ 1ರಂದು 31 ಲಕ್ಷ ರೂಪಾಯಿ ಹಳೆ ನೋಟುಗಳನ್ನು ಭಕ್ತರು ಕಾಣಿಕೆ ರೂಪದಲ್ಲಿ ತಿಮ್ಮಪ್ಪನಿಗೆ ಅರ್ಪಿಸಿದ್ದಾರೆ. ಪ್ರತಿವರ್ಷ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಸುಮಾರು 3 ಕೋಟಿಗೂ ಅಧಿಕ ಭಕ್ತರು ಆಗಮಿಸುತ್ತಾರೆ. ಪ್ರತಿನಿತ್ಯ ಸುಮಾರು 2.8 ಕೋಟಿ ರೂಪಾಯಿ ಕಾಣಿಕೆ ರೂಪದಲ್ಲಿ ಸಂಗ್ರಹವಾಗುತ್ತದೆ. 2016 ರಲ್ಲಿ 1000 ಕೋಟಿ ರೂಪಾಯಿಗೂ ಅಧಿಕ ಹಣ ಕಾಣಿಕೆ ರೂಪದಲ್ಲಿ ಹರಿದು ಬಂದಿದೆ.

Subscribe Newsletter

Get latest updates on your inbox...

Opinion Poll

  • ಡೋನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷರಾದ ಬಳಿಕ ಜನಾಂಗೀಯ ದ್ವೇಷ ಹೆಚ್ಚಾಗುತ್ತಿದೆಯೇ..?

    View Results

    Loading ... Loading ...