alex Certify
ಕನ್ನಡ ದುನಿಯಾ       Mobile App
       

Kannada Duniya

ಅಕ್ರಮವಾಗಿ ಕೂಡಿಟ್ಟಿದ್ದ 42 ಕೋಟಿ ರೂ. ಮೌಲ್ಯದ ಚಿನ್ನಾಭರಣ ಪತ್ತೆ

gold

ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದೇಶಾದ್ಯಂತ ಆಭರಣ ವ್ಯಾಪಾರಿಗಳಿಗೆ ನಡುಕ ಹುಟ್ಟಿಸಿದ್ದಾರೆ. ಅಧಿಕಾರಿಗಳ ತಪಾಸಣೆ ವೇಳೆ 42 ಕೋಟಿ ರೂ. ಮೌಲ್ಯದ ಅಕ್ರಮ ಚಿನ್ನಾಭರಣ ಪತ್ತೆಯಾಗಿದೆ.

ಅಮಾನ್ಯ ನೋಟುಗಳ ಜಾಡು ಪತ್ತೆ ಮಾಡುವ ಜೊತೆಗೆ ಆಭರಣ ವ್ಯಾಪಾರಿಗಳು ಹಾಗೂ ಹವಾಲಾ ಆಪರೇಟರ್ ಗಳ ಮೇಲೆ ನಿಗಾ ಇಡುವಂತೆ ಕೇಂದ್ರ ಹಣಕಾಸು ಸಚಿವಾಲಯ ಆದಾಯ, ಗುಪ್ತಚರ ಸಂಸ್ಥೆಗಳಿಗೆ ಸೂಚನೆ ನೀಡಿದೆ. ಈ ಕಾರ್ಯಾಚರಣೆಗೆ ಜಾರಿ ನಿರ್ದೇಶನಾಲಯ, ಕೇಂದ್ರೀಯ ಅಬಕಾರಿ ಗುಪ್ತಚರ ಇಲಾಖೆಗಳು ಕೂಡ ಆದಾಯ ತೆರಿಗೆ ಇಲಾಖೆಗೆ ಸಾಥ್ ನೀಡಿವೆ.

ಈಗಾಗ್ಲೇ ಸುಮಾರು 25 ನಗರಗಳಲ್ಲಿರುವ 250ಕ್ಕೂ ಹೆಚ್ಚು ದೊಡ್ಡ ದೊಡ್ಡ ಆಭರಣ ಮಳಿಗೆಗಳಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಇನ್ನೊಂದೆಡೆ ಏರ್ ಪೋರ್ಟ್ ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹೈದ್ರಾಬಾದ್ ನಿಂದ ಬಂದಿಳಿದ ಪ್ರಯಾಣಿಕನ ಬಳಿಯಿದ್ದ 50 ಲಕ್ಷ ರೂ. ಮೌಲ್ಯದ ಅಮಾನ್ಯ ನೋಟುಗಳನ್ನು ಜಫ್ತಿ ಮಾಡಲಾಗಿದೆ. ದೆಹಲಿಯ ಚಾಂದಿನಿ ಚೌಕ ಮತ್ತು ಕರೋಲ್ ಭಾಗ್ ನಲ್ಲಿ ಆಭರಣ ವ್ಯಾಪಾರಿಗಳ ಬಳಿ 22 ಕೋಟಿ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆಯಾಗಿದೆ. ಚಂಡೀಗಢ, ಲುಧಿಯಾನಾ ಮತ್ತು ಜಲಂಧರ್ ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ 20 ಕೋಟಿ ರೂ. ಮೌಲ್ಯದ ಗೋಲ್ಡ್ ಸ್ಟಾಕ್ಸ್ ಸಿಕ್ಕಿವೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...