alex Certify
ಕನ್ನಡ ದುನಿಯಾ       Mobile App
       

Kannada Duniya

ಚೇಂಜ್ ಸಿಗದೆ ರಣಜಿ ಕ್ರಿಕೆಟಿಗರ ಪರದಾಟ

ranji

ಕಪ್ಪುಹಣ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕೈಗೊಂಡ ದಿಟ್ಟ ಕ್ರಮದಿಂದ ಜನಸಾಮಾನ್ಯರು ಮಾತ್ರವಲ್ಲ ಕ್ರಿಕೆಟ್ ಜಗತ್ತು ಕೂಡ ಹಣವಿಲ್ಲದೆ ಕಂಗಾಲಾಗಿದೆ. ಅದರಲ್ಲೂ ದೇಶೀಯ ಪಂದ್ಯಗಳನ್ನಾಡುವ ಕ್ರಿಕೆಟಿಗರು ಕೈಯಲ್ಲಿ ಕಾಸಿಲ್ಲದೆ ಒದ್ದಾಡುತ್ತಿದ್ದಾರೆ. ಮುಂಬೈ ಮತ್ತು ಕೋಲ್ಕತ್ತಾದಲ್ಲಿ ರಣಜಿ ಪಂದ್ಯ ಆಡುತ್ತಿರುವ ಗೋವಾ ಮತ್ತು ವಿದರ್ಭ ತಂಡಗಳಲ್ಲಿ ಹಣಕಾಸಿನ ಮುಗ್ಗಟ್ಟು ತಲೆದೋರಿದೆ.

ಕೇರಳ ತಂಡದ ವಿರುದ್ಧ ಆಡುತ್ತಿರುವ ಗೋವಾ ತಂಡ ಮುಂಬೈನ ಹೋಟೆಲ್ ಒಂದರಲ್ಲಿ ತಂಗಿದೆ. ಅವರಿಗೆ ಕಾಂಪ್ಲಿಮೆಂಟರಿಯಾಗಿ ಬೆಳಗ್ಗೆ ತಿಂಡಿಯನ್ನು ಮಾತ್ರ ಕೊಡಲಾಗುತ್ತದೆ. ಉಳಿದ ಊಟದ ಖರ್ಚನ್ನೆಲ್ಲ ಅವರೇ ಭರಿಸಬೇಕು. ಆದ್ರೆ ಕ್ರಿಕೆಟಿಗರ ಬಳಿ ನಗದು ಇಲ್ಲ, ಹಳೆಯ 500 ಮತ್ತು 1000 ರೂಪಾಯಿ ನೋಟುಗಳಿಗೆ ಚೇಂಜ್ ಸಿಗ್ತಾ ಇಲ್ಲ. ಪ್ರತಿದಿನ ಹೊರಗೆ ಹೋಗಿ ಕಾರ್ಡ್ ಸ್ವೈಪ್ ಮಾಡಿ ಊಟ ತಿಂಡಿ ಮಾಡೋದು ಕೂಡ ಕಷ್ಟ ಎನ್ನುತ್ತಾರೆ ಆಟಗಾರರು. ಇನ್ನೊಂದೆಡೆ ಈಡನ್ ಗಾರ್ಡನ್ ನಲ್ಲಿ ಮಹಾರಾಷ್ಟ್ರ ವಿರುದ್ಧ ಆಡುತ್ತಿರುವ ವಿದರ್ಭ ತಂಡದ ಆಟಗಾರರು ಕೂಡ ಕ್ಯಾಶ್ ಇಲ್ಲದೆ ಕೈಕೈ ಹಿಸುಕಿಕೊಳ್ಳುವಂತಾಗಿದೆ. ಚಿಕ್ಕ ಮೊತ್ತದ ನಗದನ್ನು ಒದಗಿಸುವಂತೆ ಆಟಗಾರರು ಬಂಗಾಳ ಕ್ರಿಕೆಟ್ ಮಂಡಳಿಯ ಮೊರೆ ಹೋಗಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...