alex Certify
ಕನ್ನಡ ದುನಿಯಾ       Mobile App
       

Kannada Duniya

20 ಸಾವಿರ ಮಂದಿಗೆ ಉಚಿತ ತರಕಾರಿ ಹಂಚಿದ ರೈತರು

free-vegetable-engaged-li

ನೋಟು ನಿಷೇಧದ ನಂತ್ರ ರೈತರ ಸಮಸ್ಯೆ ಹೇಳತೀರದಾಗಿದೆ. ತರಕಾರಿ ಬೆಲೆ ಪಾತಾಳಕ್ಕಿಳಿದಿದೆ. ನಗದು ಕೊರತೆಯಿಂದಾಗಿ ಖರೀದಿ ಕಡಿಮೆಯಾಗಿದೆ. ಇದ್ರಿಂದ ಬೇಸತ್ತ ಕೆಲ ರೈತರು ಟೊಮೋಟೋವನ್ನು ರಸ್ತೆಗೆಸೆದು ಆಕ್ರೋಶ ವ್ಯಕ್ತಪಡಿಸಿದ್ದರು. ಆದ್ರೆ ಛತ್ತೀಸ್ಗಡದ ರೈತರು ಉಚಿತವಾಗಿ ತರಕಾರಿ ಹಂಚಿದ್ದಾರೆ.

ರಾಯ್ಪುರದಲ್ಲಿ ಟೊಮೋಟೋ ಸೇರಿದಂತೆ ಅನೇಕ ತರಕಾರಿಗಳನ್ನು ರೈತರು ಉಚಿತವಾಗಿ ಹಂಚಿದ್ದಾರೆ. ಸುಮಾರು ಒಂದು ಸಾವಿರಕ್ಕೂ ಹೆಚ್ಚು ರೈತರು ಇದ್ರಲ್ಲಿ ಪಾಲ್ಗೊಂಡಿದ್ದರು ಎಂದು ರೈತ ಸಂಘದ ಮುಖಂಡರು ತಿಳಿಸಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಧರಣಿ ಸ್ಥಳದಲ್ಲಿ ಉಚಿತ ವಿತರಣೆ ಶುರುವಾಗಿತ್ತು. ಇದಕ್ಕಿಂತಲೂ ಮೊದಲೇ ಜನರು ಕ್ಯೂನಲ್ಲಿ ನಿಂತಿದ್ದರು.

ಐದು ಗಂಟೆಯಲ್ಲಿ ರೈತರು ಸುಮಾರು ಒಂದು ಲಕ್ಷ ಕೆಜಿ ತರಕಾರಿಯನ್ನು ವಿತರಿಸಿದ್ದಾರೆ. ರೈತರ ಪ್ರಕಾರ ಒಬ್ಬ ವ್ಯಕ್ತಿಗೆ 5 ಕೆ.ಜಿ. ಯಂತೆ 20 ಸಾವಿರ ಮಂದಿಗೆ ಉಚಿತವಾಗಿ ತರಕಾರಿ ಹಂಚಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...