alex Certify
ಕನ್ನಡ ದುನಿಯಾ       Mobile App
       

Kannada Duniya

4 ಗಂಟೆಗಳಲ್ಲಿ ಸೇಲಾಯ್ತು 75 ಕೋಟಿ ಮೌಲ್ಯದ ಚಿನ್ನ

gold

ನವೆಂಬರ್ 8ರಂದು ನೋಟು ನಿಷೇಧದ ಘೋಷಣೆ ಹೊರಬಿದ್ದ ಮರುಕ್ಷಣವೇ ದೇಶದ ಕೆಲವು ಆಭರಣ ಮಳಿಗೆಗಳಲ್ಲಿ ಮಾರಾಟದ ಭರಾಟೆ. ರಾತ್ರಿ 8 ರಿಂದ ಮಧ್ಯರಾತ್ರಿ 12 ಗಂಟೆವರೆಗೆ ನವದೆಹಲಿಯ 3 ಅಂಗಡಿಗಳಲ್ಲಿ ತಲಾ 100 ಕೋಟಿಗಳಷ್ಟು ವಹಿವಾಟು ನಡೆದಿದೆ. ‘ಕುಂದನ್ ಕೇರ್ ಪ್ರಾಡಕ್ಟ್ಸ್ ಲಿಮಿಟೆಡ್’ ಅಂದು 200-250 ಕೆಜಿ ಚಿನ್ನಾಭರಣ ಮಾರಾಟ ಮಾಡಿದೆ.

ಚಾಂದಿನಿ ಚೌಕದ ಕುಚಾ ಮಹಾಜನಿ ಪ್ರದೇಶದಲ್ಲಿರುವ ಒಂದು ಮಳಿಗೆಯಲ್ಲಿ 75 ಕೋಟಿ ಮೌಲ್ಯದ ಆಭರಣ ಮಾರಾಟವಾಗಿದೆ. ಪ್ಯಾನ್ ನಂಬರ್ ಪಡೆಯದೆ ಪ್ರತಿ ಗ್ರಾಹಕರಿಗೆ 2 ಲಕ್ಷ ಮೌಲ್ಯದ ಆಭರಣಗಳನ್ನು ಮಾರಾಟ ಮಾಡಲಾಗಿದೆ.

ಈ ಬಗ್ಗೆ ಪರಿಶೀಲನೆ ನಡೆಸಿರುವ ಆದಾಯ ತೆರಿಗೆ ಇಲಾಖೆ ಕೇಂದ್ರ ನೇರ ತೆರಿಗೆ ಮಂಡಳಿಗೆ ಪ್ರಾಥಮಿಕ ವರದಿಯನ್ನು ಕಳುಹಿಸಿದೆ. ಜಾರಿ ನಿರ್ದೇಶನಾಲಯ ಕೂಡ ತನಿಖೆ ನಡೆಸಲಿದೆ. ಕುಂದನ್ ಕೇರ್ ಪ್ರಾಡಕ್ಟ್ಸ್ ಲಿಮಿಟೆಡ್ ಹಳೆ ನೋಟುಗಳಲ್ಲಿ ಕೇವಲ 90 ಕೋಟಿ ರೂಪಾಯಿ ಮಾತ್ರ ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿದೆ. ನವೆಂಬರ್ 8ರಂದು ಮಾರಾಟವಾದ ಚಿನ್ನದ ವಿವರವನ್ನು ಕಂಪನಿ ದಾಖಲೆಗಳಲ್ಲಿ ನಮೂದಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಚಾಂದನಿ ಚೌಕದ ಮಳಿಗೆಯಲ್ಲಿ ಎಪ್ರಿಲ್ ನಿಂದ ಸಪ್ಟೆಂಬರ್ ವರೆಗೆ ಕೇವಲ 40 ಕೋಟಿ ವಹಿವಾಟು ನಡೆದಿತ್ತು. ಅದರಲ್ಲಿ 4 ಕೋಟಿ ರೂಪಾಯಿಯಷ್ಟು ಮಾತ್ರ ನಗದು ವ್ಯವಹಾರವಾಗಿದೆ. ಆದ್ರೆ ನವೆಂಬರ್ 8ರಂದು ಒಂದೇ ದಿನ 75 ಕೋಟಿ ವಹಿವಾಟು ನಡೆದಿದೆ. ಅಂಗಡಿಯಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನೆಲ್ಲ ನಾಶಮಾಡಿದ್ದಾರೆಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಆದ್ರೆ ಅಂಗಡಿ ಮಾಲೀಕರು ಇದನ್ನು ನಿರಾಕರಿಸಿದ್ದು, ಅಕ್ರಮ ವಹಿವಾಟು ನಡೆದಿಲ್ಲ ಎಂದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...