alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಕ್ಸ್ ಆಟಿಕೆಗಳಿಗೆ ಈ ರಾಜ್ಯದಲ್ಲಿದೆ ಭಾರೀ ಡಿಮ್ಯಾಂಡ್!

toys

ತಮಿಳುನಾಡಿನಲ್ಲಿ ದಿನೇ ದಿನೇ ವಯಸ್ಕರ ಸೆಕ್ಸ್ ಆಟಿಕೆಗಳಿಗೆ ಬೇಡಿಕೆ ಹೆಚ್ತಾನೇ ಇದೆ. ಪ್ರತಿನಿತ್ಯ ವಿದೇಶದಿಂದ ಒಂದೊಂದು ಬಾಕ್ಸ್ ಆಟಿಕೆಗಳು ಚೆನ್ನೈ ವಿಮಾನ ನಿಲ್ದಾಣಕ್ಕೆ ಬರ್ತಾ ಇವೆ. ಲಂಡನ್, ಹಾಂಗ್ ಕಾಂಗ್, ಚೀನಾ ಮತ್ತು ಸಿಂಗಾಪುರ ದೇಶಗಳಲ್ಲಿ ಸೆಕ್ಸ್ ಆಟಿಕೆಗಳ ಉತ್ಪಾದನೆ ಮತ್ತು ಮಾರಾಟ ಅಧಿಕವಾಗಿದೆ.

ಈ ದೇಶಗಳಿಂದ್ಲೇ ತಮಿಳುನಾಡಿಗೆ ಆಟಿಕೆಗಳು ಆಮದಾಗ್ತಿವೆ. ಆನ್ ಲೈನ್ ಮತ್ತು ಪೋಸ್ಟಲ್ ಮೂಲಕವೂ ಗ್ರಾಹಕರು ಆಟಿಕೆಗಳನ್ನು ತರಿಸಿಕೊಳ್ತಿದ್ದಾರೆ. 2014-15 ರಲ್ಲಿ ಒಟ್ಟು 169 ಪಾರ್ಸೆಲ್ ಗಳನ್ನು ತರಿಸಲಾಗಿದೆ. 2015-16ರಲ್ಲಿ ಈ ಪಾರ್ಸೆಲ್ ಗಳ ಸಂಖ್ಯೆ 238ರಷ್ಟಾಗಿತ್ತು. ಈಗ ಬಹುತೇಕ ಡಬಲ್ ಆಗಿದೆ. ಈ ವರ್ಷ ಸೆಕ್ಸ್ ಆಟಿಕೆಗಳು ತುಂಬಿದ್ದ 342 ಪಾರ್ಸಲ್ ಗಳು ವಿದೇಶದಿಂದ ಬಂದಿವೆ.

ಸೆಕ್ಸ್ ಟಾಯ್ಸ್ ಆಮದು ಮಾಡಿಕೊಳ್ಳೋದು ಅಕ್ರಮ, ಹಾಗೇನಾದ್ರೂ ಮಾಡಿದ್ರೆ 5000 ರೂ. ದಂಡ ವಿಧಿಸೋದಾಗಿ ಕಸ್ಟಮ್ಸ್ ಅಧಿಕಾರಿಗಳು ಹೇಳ್ತಿದ್ದಾರೆ. ಆದ್ರೆ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ಆಟಿಕೆಗಳನ್ನು ತರಲಾಗ್ತಿದೆ. ಮಧ್ಯವಯಸ್ಕ ಮಹಿಳೆ ಮತ್ತು ಪುರುಷರೇ ಹೆಚ್ಚಾಗಿ ಇಂತಹ ಆಟಿಕೆಗಳಿಗೆ ಮಾರುಹೋಗುತ್ತಿದ್ದಾರೆ.

ಮೃದುವಾದ ಸೆಕ್ಸ್ ಆಟಿಕೆಗಳನ್ನು ರಬ್ಬರ್ ನಿಂದ ಮಾಡಲಾಗುತ್ತದೆ. ಕೆಲವು ಆಟಿಕೆಗಳಿಗೆ ಬ್ಯಾಟರಿಯನ್ನು ಕೂಡ ಅಳವಡಿಸುತ್ತಾರೆ. ಈ ಆಟಿಕೆಗಳ ಬೆಲೆ 300 ರೂಪಾಯಿಯಿಂದ 15,000 ರೂಪಾಯಿವರೆಗೂ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...