alex Certify
ಕನ್ನಡ ದುನಿಯಾ       Mobile App
       

Kannada Duniya

ಕೋಟ್ಯಾಂತರ ರೂ. ಮೌಲ್ಯದ ಚಿನ್ನ ಮಂಗಮಾಯ

deliveryman-vanishes-with-rs-2-crore-gold-consignmentಮುಂಬೈನ ಚಿನ್ನಾಭರಣ ವ್ಯಾಪಾರಿಯೊಬ್ಬರು ಆಭರಣ ತಯಾರಿಕೆಗಾಗಿ ಆರ್ಡರ್ ಮಾಡಿದ್ದ 2.2 ಕೋಟಿ ರೂ. ಮೌಲ್ಯದ 8 ಕೆ.ಜಿ. ಚಿನ್ನದ ಗಟ್ಟಿಗಳನ್ನು ತರುತ್ತಿದ್ದ ವ್ಯಕ್ತಿಯೇ ಅವುಗಳನ್ನು ತೆಗೆದುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.

ಮುಂಬೈನ ಬೈಕುಲ್ಲಾದ ಬಿ. ಜೈನ್ ಎಂಬವರು ಹೈದರಾಬಾದ್ ವ್ಯಾಪಾರಿ ಬಳಿ ಚಿನ್ನದ ಗಟ್ಟಿಗಳನ್ನು ಆರ್ಡರ್ ಮಾಡಿದ್ದರು. ಚಿನ್ನದ ಗಟ್ಟಿಗಳನ್ನು ವ್ಯಕ್ತಿಯೊಬ್ಬ ತನ್ನ ಜಾಕೇಟ್ ನಲ್ಲಿಟ್ಟುಕೊಂಡು ಹೈದರಾಬಾದ್ ನಿಂದ ಮುಂಬೈಗೆ ಖಾಸಗಿ ಬಸ್ ನಲ್ಲಿ ಹೊರಟಿದ್ದಾನೆ.

ಜೈನ್ ಅವರ ಬಳಿ ಬಂದ ಆತ, ಮಾರ್ಗ ಮಧ್ಯದಲ್ಲಿ ತಾನು ಮೂತ್ರ ವಿಸರ್ಜನೆಗೆ ಇಳಿದಿದ್ದು, ಆಗ ಯಾರೋ ಜಾಕೆಟ್ ಕಳವು ಮಾಡಿದ್ದಾರೆಂದು ಹೇಳಿದ್ದಾನೆ. ಆತನನ್ನು ಕರೆದುಕೊಂಡು ಜೈನ್ ಪೊಲೀಸ್ ಠಾಣೆಗೆ ತೆರಳಿದ್ದು, ಅಲ್ಲಿಯೂ ಅದೇ ಕಥೆ ಹೇಳಿದ್ದಾನೆ.

ಈತನ ಮಾತನ್ನು ನಂಬದ ಪೊಲೀಸರು ಆತ ಹೇಳಿದ ಸ್ಥಳದಲ್ಲಿನ ಸಿಸಿ ಟಿವಿ ದೃಶ್ಯಾವಳಿಗಳ ಪರೀಕ್ಷೆಗೆ ಮುಂದಾಗಿದ್ದು, ಸಿಕ್ಕಿ ಬೀಳುವನೆಂಬ ಭಯದಲ್ಲಿ ಆರೋಪಿ ಪರಾರಿಯಾಗಿದ್ದಾನೆ. ಇದೀಗ ಪೊಲೀಸರ ಆತನ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...