alex Certify
ಕನ್ನಡ ದುನಿಯಾ       Mobile App
       

Kannada Duniya

ಮಳೆ ಮಧ್ಯೆ ಸಾರ್ವಜನಿಕ ಪ್ರದೇಶದಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ

ಉತ್ತರ ಪ್ರದೇಶದ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ ಹಾಗೂ ನಿರ್ಲಕ್ಷ್ಯಕ್ಕೆ ಕೈಗನ್ನಡಿಯಾಗಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಆಸ್ಪತ್ರೆಯಲ್ಲಿ ವೈದ್ಯರಿರದ ಕಾರಣ ಗರ್ಭಿಣಿಯೊಬ್ಬಳು ಆಸ್ಪತ್ರೆ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ.

ಘಟನೆ ಮೇನ್ಪುರಿಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಗರ್ಭಿಣಿ ಅತ್ತೆ ಹಾಗೂ ಅಲ್ಲಿದ್ದ ಕೆಲ ಮಹಿಳೆಯರು ಹೆರಿಗೆಗೆ ನೆರವಾಗಿದ್ದಾರೆ. ವೈದ್ಯರ ಅನುಪಸ್ಥಿತಿಯಲ್ಲಿ ಮಗುವಿನ ಹೊಕ್ಕಳಬಳ್ಳಿ ಕತ್ತರಿಸಿದ ಮಹಿಳೆಯರು ಆರೋಗ್ಯವಂತ ಮಗು ಜನನಕ್ಕೆ ನೆರವಾಗಿದ್ದಾರೆ.

ಇದ್ರ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಲದ ಮೇಲೆ ನವಜಾತ ಶಿಶು ಮಲಗಿರುವುದನ್ನು ನೋಡಬಹುದಾಗಿದೆ. ಮಳೆ ಮಧ್ಯೆಯೇ ಮಹಿಳೆಯರು ಹೆರಿಗೆ ಮಾಡಿಸಿದ್ದು, ಮಗುವಿನ ಸ್ಥಿತಿ ನೋಡಿದ್ರೆ ಕರುಳು ಕಿತ್ತು ಬರುತ್ತದೆ. ಆಸ್ಪತ್ರೆ ನಿರ್ಲಕ್ಷ್ಯಕ್ಕೆ ಮಹಿಳೆಯರು ಹಿಡಿಶಾಪ ಹಾಕಿದ್ದಾರೆ. ಸೂಕ್ತ ತನಿಖೆಗೆ ಸಿಎಂಒ ಆದೇಶ ನೀಡಿದ್ದಾರೆ ಎನ್ನಲಾಗ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...