alex Certify
ಕನ್ನಡ ದುನಿಯಾ       Mobile App
       

Kannada Duniya

ಬದಲಾಯ್ತು ದೆಹಲಿಯ ಅಕ್ಬರ್ ರಸ್ತೆಯ ಹೆಸರು

ದೆಹಲಿಯ ಅಕ್ಬರ್ ರಸ್ತೆಯ ಹೆಸರು ಬದಲಾಯಿಸಲಾಗಿದೆ. ರಾಜಧಾನಿಯ ಹೃದಯ ಭಾಗದಲ್ಲಿರುವ, ಹಚ್ಚ ಹಸಿರಿನ ಮರ ಗಿಡಗಳಿಂದ ಕಂಗೊಳಿಸುವ ಈ ರಸ್ತೆಗೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಕಿಡಿಗೇಡಿಗಳು ಮಹಾರಾಣಾ ಪ್ರತಾಪ್ ರಸ್ತೆ ಎಂದು ನಾಮಕರಣ ಮಾಡಿದ್ರು.

ಇವತ್ತು ಅಕ್ಬರ್ ವಿರುದ್ಧ ಹೋರಾಡಿದ ರಾಜಸ್ಥಾನದ ರಾಜ ಮಹಾರಾಣಾ ಪ್ರತಾಪ್ ಅವರ 1576 ನೇ ಜನ್ಮದಿನ. ಹೀಗಾಗಿ ಕೆಲ ಕಿಡಿಗೇಡಿಗಳು ಅಕ್ಬರ್ ರೋಡ್ ಎಂಬ ನಾಮಫಲಕದ ಮೇಲೆ ಮಹಾರಾಣಾ ಪ್ರತಾಪ್ ರೋಡ್ ಎಂದು ಪೋಸ್ಟರ್ ಅಂಟಿಸಿದ್ರು. ಈ ಹಿನ್ನೆಲೆಯಲ್ಲಿ ಪೊಲೀಸ್ ಸರ್ಪಗಾವಲಿನಲ್ಲಿ ಈ ಪೋಸ್ಟರ್ ನ್ನು ತೆಗೆದು ಹಾಕಲಾಯ್ತು.

ಮೊಗಲ್ ದೊರೆ ಅಕ್ಬರ್ ನ ಹೆಸರಿಟ್ಟಿರುವ ಈ ರಸ್ತೆಯಲ್ಲಿ ದೇಶದ ದೊಡ್ಡ ರಾಜಕಾರಣಿಗಳ ನಿವಾಸಗಳು, ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿ ಇದೆ.

2015ರಲ್ಲಿ ದೆಹಲಿ ನಗರಸಭೆ, ಇಲ್ಲಿನ ಮತ್ತೊಂದು ರಸ್ತೆಯ ಹೆಸರನ್ನು ಬದಲಾಯಿಸಿ, ಅಕ್ಬರ್ ಮೊಮ್ಮಗ ಔರಂಗಜೇಬ್ ರಸ್ತೆ ಎಂದು ನಾಮಕರಣ ಮಾಡಿತ್ತು. ತದನಂತರ ಇದು ಡಾ. ಎಪಿಜೆ ಅಬ್ದುಲ್ ಕಲಾಂ ರಸ್ತೆಯಾಗಿ ಮಾರ್ಪಟ್ಟಿತು. ಇನ್ನು ಮುಂದಿನ ದಿನಗಳಲ್ಲಿ ದೆಹಲಿಯ ಯಾವ ಯಾವ ರಸ್ತೆಗಳಿಗೆ ಯಾರ ಯಾರ ಹೆಸರಿಡ್ತಾರೆ ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...