alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ಬುಕ್ ನಲ್ಲಿ ಕಿರುಕುಳ ನೀಡ್ತಿದ್ದವನಿಗೆ ಬುದ್ದಿ ಕಲಿಸಿದ್ಲು ಯುವತಿ

richie_2016920_235814_20_09_2016

ಫೇಸ್ಬುಕ್ ಮೂಲಕ ಕಿರುಕುಳ ನೀಡ್ತಿದ್ದ ವ್ಯಕ್ತಿಯೊಬ್ಬನಿಗೆ ದೆಹಲಿ ಮೂಲದ ಹುಡುಗಿಯೊಬ್ಬಳು ಬುದ್ಧಿ ಕಲಿಸಿದ್ದಾಳೆ. ಆಕೆ ಮಾಡಿದ ಕೆಲಸದಿಂದ ಕಂಗಾಲಾದ ವ್ಯಕ್ತಿ 200 ಕ್ಕೂ ಹೆಚ್ಚು ಬಾರಿ ಕ್ಷಮೆ ಕೋರಿದ್ದಾನೆ. ಜೊತೆಗೆ ಇನ್ಮುಂದೆ ಈ ರೀತಿ ಮಾಡುವುದಿಲ್ಲವೆಂದಿದ್ದಾನೆ.

ಇಂದೋರ್ ಮೂಲದ ಕಮಲ್, ದೆಹಲಿ ಮೂಲದ ರಿಚಿ ಪಿಯರ್ಸ್ ಗೆ ಫೇಸ್ಬುಕ್ ಮೂಲಕ ಗೆಳೆಯನಾಗಿದ್ದ. ಬೇರೆ ಬೇರೆ ರೀತಿಯಲ್ಲಿ ಸಂದೇಶ ರವಾನೆ ಮಾಡುವ ಮೂಲಕ ರಿಚಿಗೆ ಕಿರುಕುಳ ನೀಡ್ತಿದ್ದ ಕಮಲ್. ಐ ಲವ್ ಯೂ, ಐ ಮಿಸ್ ಯೂ ಸೇರಿದಂತೆ ಅನೇಕ ಸಂದೇಶ ಕಳುಹಿಸಿದ್ದಾನೆ ಕಮಲ್. ಜೊತೆಗೆ ಫೋಟೋ ಹಾಗೂ ವಿಡಿಯೋ ಸಂದೇಶ ಕೂಡ ಕಳುಹಿಸುತ್ತಿದ್ದ ಎನ್ನಲಾಗಿದೆ.

ಕಮಲ್ ಕಿರುಕುಳಕ್ಕೆ ಬೇಸತ್ತಿದ್ದ ರಿಚಿ ಸರಿಯಾಗಿ ಬುದ್ದಿ ಕಲಿಸಲು ನಿರ್ಧರಿಸಿದ್ದಾಳೆ. 40 ವರ್ಷದ ಕಮಲ್ ಬೇರೆ ಗೆಳೆಯರ ಫೋಟೋಗಳಿಗೂ ಕಮೆಂಟ್ ಮಾಡುವುದನ್ನು ಆಕೆ ತಿಳಿದುಕೊಂಡಿದ್ದಾಳೆ. ಹಾಗೆ ಒಂದು ಕಮೆಂಟ್ ಕೆಳಗೆ ತನ್ನ ಸಂದೇಶ ಹಾಕಿದ್ದಾಳೆ ರಿಚಿ.

”ನನ್ನ ಹೆಸರು ರಿಚಿ ಪಿಯರ್ಸ್. ಮಿಸ್ಟರ್ ಕಮಲ್ ನನಗೆ ಫೇಸ್ಬುಕ್ ನಲ್ಲಿ ತೊಂದರೆ ಕೊಡ್ತಿದ್ದಾನೆ. ಐ ಲವ್ ಯೂ, ಐ ಮಿಸ್ ಯೂ ಎಂಬ ಸಂದೇಶವನ್ನು ಹಾಕಿದ್ದಾನೆ. 40 ವರ್ಷ ವಯಸ್ಸಾಗಿದ್ದರೂ ಫೇಸ್ಬುಕ್ ನಲ್ಲಿ ಫ್ಲರ್ಟ್ ಮಾಡ್ತಿದ್ದಾನೆ. ಅಂಕಲ್ ಈಗಲಾದ್ರೂ ಸುಧಾರಿಸಿಕೊಳ್ಳಿ” ಎಂದು ಸಂದೇಶ ಹಾಕಿದ್ದಾಳೆ ರಿಚಿ.

ಇದನ್ನು ನೋಡಿದ ಕಮಲ್ ಸ್ನೇಹಿತರು ಆತನಿಗೆ ಫೋನ್ ಮಾಡಿ ಬುದ್ದಿ ಹೇಳಿದ್ದಾರೆ. ಹಾಗೆ ಕಮಲ್ ಕೂಡ ರಿಚಿಯ ಕ್ಷಮೆ ಕೋರಿದ್ದಾನೆ. 200 ಕ್ಕೂ ಹೆಚ್ಚು ಬಾರಿ ಕ್ಷಮೆ ಕೋರಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...