alex Certify
ಕನ್ನಡ ದುನಿಯಾ       Mobile App
       

Kannada Duniya

ಅಶ್ಲೀಲ ಕಮೆಂಟ್ ಮಾಡಿದ ಪುಂಡನಿಗೆ ಹಿಗ್ಗಾಮುಗ್ಗಾ ಇಕ್ಕಿದ್ಲು ಯುವತಿ

ದೆಹಲಿಯ ಜನನಿಬಿಡ ಮಾರುಕಟ್ಟೆಯೊಂದರಲ್ಲಿ ಅಶ್ಲೀಲ ಕಮೆಂಟ್ ಮಾಡಿದ ವ್ಯಕ್ತಿಯೊಬ್ಬನಿಗೆ ಯುವತಿ ತಕ್ಕ ಪಾಠ ಕಲಿಸಿದ್ದಾಳೆ. ಆತನ ಕೆನ್ನೆಗೊಂದು ಬಾರಿಸಿ, ಕಾಲರ್ ಪಟ್ಟಿ ಹಿಡಿದು ದರದರನೆ ಪೊಲೀಸ್ ಠಾಣೆಗೆ ಎಳೆದೊಯ್ದಿದ್ದಾಳೆ.

ಕರೋಲ್ ಭಾಗ್ ನಲ್ಲಿರೋ ಗಫರ್ ಮಾರುಕಟ್ಟೆ ಬಳಿ ಯುವತಿ ತನ್ನ ಸ್ನೇಹಿತೆ ಜೊತೆ ನಡೆದುಕೊಂಡು ಹೋಗುತ್ತಿದ್ಲು. ಪುಂಡರ ಗುಂಪೊಂದು ಅವರನ್ನು ಹಿಂಬಾಲಿಸಿ ಬಂದಿದೆ. ಅವರಿಂದ ತಪ್ಪಿಸಿಕೊಳ್ಳಲು ಯುವತಿಯರು ಸೈಕಲ್ ರಿಕ್ಷಾ ಏರಿದ್ದಾರೆ.

ಆದ್ರೂ ಪೋಕರಿಗಳ ಗುಂಪು ಅವರನ್ನು ಹಿಂಬಾಲಿಸುವುದನ್ನು ಬಿಟ್ಟಿಲ್ಲ. ಯುವತಿ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದಾರೆ. ಕೂಡಲೇ ರಿಕ್ಷಾದಿಂದ ಇಳಿದ ಯುವತಿ, ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬನಿಗೆ ಕಪಾಳ ಮೋಕ್ಷ ಮಾಡಿದ್ದಾಳೆ.

ಅವನನ್ನು ಪೊಲೀಸ್ ಠಾಣೆಗೆ ಎಳೆದು ತಂದು ದೂರು ಕೊಟ್ಟಿದ್ದಾಳೆ. ಮನೀಶ್ ಹಾಗೂ ಅಭಿಷೇಕ್ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರೂ ಹರಿಯಾಣ ಮೂಲದವರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...