alex Certify
ಕನ್ನಡ ದುನಿಯಾ       Mobile App
       

Kannada Duniya

ಗನ್ ತೋರಿಸಿ ಕೂದಲು ಹೊತ್ತೊಯ್ದ ಖದೀಮ ಅರೆಸ್ಟ್

ಇದೊಂದು ವಿಚಿತ್ರ ಪ್ರಕರಣ. ಗನ್ ಪಾಯಿಂಟ್ ನಲ್ಲಿ 200 ಕೆಜಿ ತಲೆಕೂದಲು ದರೋಡೆ ಮಾಡಿದ್ದ ಪ್ರಕರಣವನ್ನು ಪೊಲೀಸಲು ಬೇಧಿಸಿದ್ದಾರೆ. ಕೂದಲು ವ್ಯಾಪಾರಿಗಳ ನಡುವಿನ ಪೈಪೋಟಿ ಒಂದು ಹಂತದಲ್ಲಿ ಹಾದಿ ತಪ್ಪಿ, ಒಬ್ಬ ಇನ್ನೊಬ್ಬನಿಗೆ ಗನ್ ಮತ್ತು ಚಾಕು ತೋರಿಸಿ 25 ಲಕ್ಷ ಮೌಲ್ಯದ ಕೂದಲು ಅಪಹರಿಸಿದ್ದ.

ಕೂದಲು ಹಾಗೂ ವಿಗ್ ವ್ಯಾಪಾರಿ ಜಹಾಂಗೀರ್ ಮತ್ತು ಆತನ ಸಹೋದರನನ್ನು ಕೂದಲು ಸಂಸ್ಕರಣಾ ಕಾರ್ಖಾನೆಯಲ್ಲಿಯೇ ಅಜಯ್ ಕುಮಾರ್ ಎಂಬ ಪ್ರತಿಸ್ಪರ್ಧಿ ಬೆದರಿಕೆ ಹಾಕಿ ಕೂದಲನ್ನು ಹೊತ್ತೊಯ್ದಿದ್ದ. ಕಾರ್ಯಾಚರಣೆ ನಡೆಸಿದ ಪೊಲೀಸರು 119 ಕೆಜಿ ಕೂದಲನ್ನು ಅಪಹರಣಕಾರನ ಮನೆಯಿಂದ ವಶಪಡಿಸಿಕೊಂಡಿದ್ದಾರೆ. ಜತೆಗೆ ಒಂದು ನಾಡ ಪಿಸ್ತೂಲನ್ನೂ ವಶಕ್ಕೆ ಪಡೆದಿದ್ದಾರೆ. ಆರೋಪಿಯು ಕೂದಲನ್ನು ರಫ್ತು ಮಾಡಲು ಸಿದ್ಧತೆ ನಡೆಸಿದ್ದ ಎನ್ನಲಾಗಿದೆ.

ಅಂದ ಹಾಗೆ ಈ ಕೂದಲನ್ನು ತಿರುಪತಿ ಸೇರಿ ಆಂಧ್ರ ಪ್ರದೇಶ, ತಮಿಳುನಾಡಿನ ವಿವಿಧ ಕಡೆಗಳಿಂದ ಖರೀದಿ ಮಾಡಲಾಗಿತ್ತು. ಬಳಿಕ ಅದನ್ನು ಸಂಸ್ಕರಿಸಿ ಮಾರಾಟ ಮಾಡಲಾಗುತ್ತಿತ್ತು ಎಂದು ಕೂದಲು ಉದ್ಯಮಿ ತಿಳಿಸಿದ್ದಾರೆ. ಬಹುತೇಕ ಕೂದಲನ್ನು ವಿದೇಶಕ್ಕೆ ಮಾರಾಟ ಮಾಡಲಾಗುತ್ತದೆ. ಪೂರ್ಣ ವ್ಯವಹಾರ ಆನ್ ಲೈನ್ ನಲ್ಲಿ ನಡೆಯುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...