alex Certify
ಕನ್ನಡ ದುನಿಯಾ       Mobile App
       

Kannada Duniya

ಈ ರೈತರಿಗೆ ಕೇಂದ್ರದ 6 ಸಾವಿರ ರೂ. ಏಕೆ ಸಿಗ್ತಿಲ್ಲ ಗೊತ್ತಾ?

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭವನ್ನು ದೇಶದ ಕೆಲ ರಾಜ್ಯಗಳ ರೈತರು ಈಗಾಗಲೇ ಪಡೆದಿದ್ದಾರೆ. ಆದ್ರೆ ಈವರೆಗೂ ದೆಹಲಿ, ಸಿಕ್ಕಿಂ, ಪಶ್ಚಿಮ ಬಂಗಾಳ, ಲಕ್ಷದ್ವೀಪದ ರೈತರಿಗೆ ಈ ಯೋಜನೆ ಲಾಭ ಸಿಕ್ಕಿಲ್ಲ. ಇದಕ್ಕೆ ಕಾರಣ ಅಲ್ಲಿನ ರಾಜ್ಯ ಸರ್ಕಾರ.

ಕೇಂದ್ರ ಕೃಷಿ ರಾಜ್ಯ ಸಚಿವ ಕೈಲಾಶ್ ಚೌಧರಿ ಪ್ರಕಾರ, ಅಲ್ಲಿನ ರಾಜ್ಯ ಸರ್ಕಾರಗಳು ಉದ್ದೇಶಪೂರ್ವಕವಾಗಿ ರೈತರ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸಿಲ್ಲವಂತೆ. ಹಾಗಾಗಿ ಈ ರಾಜ್ಯಗಳ ರೈತರಿಗೆ ಕೇಂದ್ರ ಸರ್ಕಾರ ನೀಡುವ 6 ಸಾವಿರ ರೂಪಾಯಿ ಸಿಕ್ಕಿಲ್ಲ. ರಾಜ್ಯಗಳು ಕೇಂದ್ರದ ಯೋಜನೆಯನ್ನು ರೈತರಿಗೆ ತಲುಪಿಸದೆ ಮೋಸ ಮಾಡ್ತಿವೆ. ರೈತರ ಖಾತೆಗೆ 6 ಸಾವಿರ ರೂಪಾಯಿ ಹೋದಲ್ಲಿ ಸರ್ಕಾರಕ್ಕೆ ಏನು ನಷ್ಟವೆಂದು ಸಚಿವರು ಪ್ರಶ್ನೆ ಮಾಡಿದ್ದಾರೆ.

ಈ ನಾಲ್ಕು ರಾಜ್ಯಗಳನ್ನು ಹೊರತುಪಡಿಸಿದ್ರೆ, ದೇಶದ 3.43 ಕೋಟಿ ರೈತರಿಗೆ ಈ ಯೋಜನೆ ಲಾಭ ಸಿಕ್ಕಿದೆ. ಕೇಂದ್ರ ಸರ್ಕಾರ ಹಣವನ್ನು ಮಾತ್ರ ಕಳಿಸುತ್ತದೆ. ರೈತರ ಪಟ್ಟಿ ತಯಾರಿಸುವುದು ರಾಜ್ಯದ ಕೆಲಸವೆಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಯಾವ ರಾಜ್ಯ ರೈತರ ವಿವರವನ್ನು ಕೇಂದ್ರಕ್ಕೆ ಕಳುಹಿಸುತ್ತಿಲ್ಲವೋ ಆ ರಾಜ್ಯಗಳಿಗೆ ಕೇಂದ್ರ ಹಣ ನೀಡ್ತಿಲ್ಲ.

Subscribe Newsletter

Get latest updates on your inbox...

Opinion Poll

  • ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಮುಂದುವರೆಯಲಿದೆಯಾ ದೋಸ್ತಿ ಸರ್ಕಾರ...?

    View Results

    Loading ... Loading ...