alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳನ್ನೇ ದೇಹ ವ್ಯಾಪಾರಕ್ಕೆ ತಳ್ಳಿದ್ಲು ಮಹಾತಾಯಿ

ದೆಹಲಿಯಲ್ಲಿ 16 ವರ್ಷದ ಹುಡುಗಿಯನ್ನು ಬಲವಂತವಾಗಿ ದೇಹ ವ್ಯಾಪಾರಕ್ಕೆ ತಳ್ಳಿದ ಘಟನೆ ನಡೆದಿದೆ. ಹುಡುಗಿ ನೀಡಿದ ಮಾಹಿತಿ ಮೇರೆಗೆ ಮನಾಲಿಯಲ್ಲಿ ನಡೆಯುತ್ತಿದ್ದ ಸೆಕ್ಸ್ ರಾಕೆಟ್ ಒಂದರ ಬಣ್ಣ ಬಯಲಾಗಿದೆ. ಮಾಹಿತಿ ಪ್ರಕಾರ, ಕೆಲವು ತಿಂಗಳ ಹಿಂದೆ 16 ವರ್ಷದ ಹುಡುಗಿಯನ್ನು ಆಕೆ ಮಲತಾಯಿಯೇ ದೇಹ ವ್ಯಾಪಾರಕ್ಕೆ ತಳ್ಳಿದ್ದಳು. ದಲ್ಲಾಳಿಗೆ ಮಗಳನ್ನು ನೀಡಿ 40,000 ರೂಪಾಯಿ ಪಡೆದಿದ್ದಳು.

ದಲ್ಲಾಳಿ ಹಿಂದಿನ ತಿಂಗಳು ಹುಡುಗಿಯನ್ನು ಮನಾಲಿಗೆ ಕರೆ ತಂದಿದ್ದನಂತೆ. ಹುಡುಗಿಯನ್ನು ಬೇರೆಯವರಿಗೆ ದಲ್ಲಾಳಿ ಮಾರಾಟ ಮಾಡಿದ್ದ ಎನ್ನಲಾಗಿದೆ. ಈ ವೇಳೆ ಹುಡುಗಿ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾಳೆ. ಆಸ್ಪತ್ರೆಯೊಂದಕ್ಕೆ ಬಂದು ಅಲ್ಲಿಂದ ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ್ದಾಳೆ.

ಹುಡುಗಿ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಮುಖ್ಯ ಆರೋಪಿಯನ್ನು ಮನಾಲಿಯಲ್ಲಿಯೇ ಬಂಧಿಸಿದ್ದಾರೆ. ದಲ್ಲಾಳಿ ಬಳಿ ಇನ್ನೂ ಅನೇಕ ಹುಡುಗಿಯರಿದ್ದಾರೆ ಎಂದು ಪೀಡಿತೆ ಹೇಳಿದ್ದಾಳೆ. ಆದ್ರೆ ಯಾವುದೇ ಹುಡುಗಿಯರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ದೂರು ದಾಖಲಿಸಿಕೊಂಡ ಪೊಲೀಸರು ಹುಡುಗಿಯರ ಹುಡುಕಾಟ ಶುರು ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...