alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಪಿಂಗ್‌ ಗೆ ಕರೆದೊಯ್ಯಲು ನಿರಾಕರಿಸಿದ್ದಕ್ಕೆ ಹತ್ಯೆ

ದೀಪಾವಳಿ ಹಬ್ಬದಂದು ಶಾಪಿಂಗ್ ಹೊರಟ ಯುವಕನ ಬಳಿ ಗೆಳೆಯ ನಾನೂ ಬರುತ್ತೇನೆ ಅಂದ. ಆದರೆ ತನ್ನ ಸ್ಕೂಟರ್‌ನಲ್ಲಿ ಗೆಳೆಯನನ್ನು ಕರೆದೊಯ್ಯಲು ನಿರಾಕರಿಸಿದ. ಇಷ್ಟಕ್ಕೇ ಆತನನ್ನು ಇರಿದು ಕೊಲೆಗೈಯಲಾಗಿದೆ.

ಈ ಘಟನೆ ನಡೆದದ್ದು ರಾಜಧಾನಿ ದೆಹಲಿಯಲ್ಲಿ. ಆರೋಪಿ ಯೋಗೀಶ್‌ನನ್ನು ಬಂಧಿಸಲಾಗಿದೆ. ಮೃತ ವ್ಯಕ್ತಿಯನ್ನು ದೀಪಕ್ ಎಂದು ಗುರುತಿಸಲಾಗಿದೆ. ಬುಧವಾರ ಸಂಜೆ 19ರ ಹರೆಯದ ದೀಪಕ್ ತನ್ನ ಸ್ಕೂಟರ್‌ನಲ್ಲಿ ಕಾಶ್ಮೀರ್ ಗೇಟ್ ಸಮೀಪವಿರುವ ಟಿಬೆಟಿಯನ್ ಮಾರ್ಕೆಟ್‌ಗೆ ಹೊರಟಿದ್ದ. ಆಗ ನೆರೆಮನೆಯ ಯೋಗೇಶ್ ತಾನೂ ಬರುತ್ತೇನೆ ಅಂದ. ಆದರೆ ನಿರಾಕರಿಸಿದ ದೀಪಕ್, ಆತನನ್ನು ನಿಂದಿಸಿದ್ದಾನೆ. ಇಬ್ಬರ ಮಧ್ಯೆ ಭಾರೀ ಜಗಳವಾಗಿದೆ. ವಿಷಯ ತಿಳಿದ ಯೋಗೀಶ್ ಹೆತ್ತವರು ಸ್ಥಳಕ್ಕಾಗಮಿಸಿ ತಮ್ಮ ಮಗನಿಗೆ ಎರಡೇಟು ಬಿಗಿದು ಜಗಳ ನಿಲ್ಲಿಸಿದ್ದಾರೆ.

ಇದರಿಂದ ಅವಮಾನಗೊಂಡ ಯೋಗೀಶ್ ಕೊತಕೊತ ಕುದಿದ. ದೀಪಕ್‌ ಗೆ ಪಾಠ ಕಲಿಸಲು ಸ್ಕೆಚ್ ಹಾಕಿದ. ಮಾರನೆಯ ದಿನ ಮಧ್ಯಾಹ್ನ ದೀಪಕ್ ಒಬ್ಬಂಟಿಯಿರುವಾಗ ಮತ್ತೆ ಆತನ ಬಳಿಗೆ ಹೋದ ಯೋಗೇಶ್ ಮತ್ತೆ ವಿಷಯ ಕೆದಕಿದ್ದಾನೆ. ಮತ್ತೆ ವಾಗ್ದಾದ ನಡೆದು ಕೊನೆಗೆ ಯೋಗೀಶ್ ಚೂರಿಯಿಂದ ದೀಪಕ್‌ಗೆ ಇರಿದಿದ್ದಾನೆ. ಆತನನ್ನು ಆಸ್ಪತ್ರೆಗೆ ಕೊಂಡೊಯ್ಯುವ ವೇಳೆಗೇ ಪ್ರಾಣಪಕ್ಷಿ ಹಾರಿಹೋಗಿತ್ತು. ಪೊಲೀಸರೀಗ ಯೋಗೀಶ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...