alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯಾರ್ಥಿಯ ಪ್ರಾಣಕ್ಕೆ ಮುಳುವಾಯ್ತು ಬೈಕ್ ಸ್ಟಂಟ್

stunt

ದೆಹಲಿಯ ಶಾಸ್ತ್ರಿ ಪಾರ್ಕ್ ಬಳಿ ಕೆಟಿಎಂ ಡ್ಯೂಕ್ ಬೈಕ್ ನಲ್ಲಿ ಸ್ಟಂಟ್ ಮಾಡಲು ಹೋಗಿ 15 ವರ್ಷದ ಬಾಲಕನೊಬ್ಬ ಜೀವ ಕಳೆದುಕೊಂಡಿದ್ದಾನೆ. ಆತನ ಸ್ನೇಹಿತನ ಸ್ಥಿತಿ ಚಿಂತಾಜನಕವಾಗಿದೆ. ಮಹಮದ್ ಉಮರ್ ಶೇಕ್ ಮೃತಪಟ್ಟಿದ್ದು, ಮಹಮದ್ ಯೂನಸ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ.

ಉಮರ್ 8ನೇ ತರಗತಿಯಲ್ಲಿ ಓದ್ತಾ ಇದ್ದ. ಪಕ್ಕದ ಮನೆಯವನ ಬಳಿ ಇದ್ದ ಕೆಟಿಎಂ ಡ್ಯೂಕ್ ಬೈಕ್ ನೋಡಿ ತನಗೂ ಅಂಥದ್ದು ಬೇಕು ಅಂತಾ ಉಮರ್ ಹಠ ಹಿಡಿದಿದ್ದ. ಅದಕ್ಕೆ ಒಪ್ಪಿದ ಹೆತ್ತವರು 1.5 ಲಕ್ಷ ರೂ. ಮೌಲ್ಯದ ಬೈಕನ್ನು ಮಗನಿಗೆ ಗಿಫ್ಟ್ ಆಗಿ ಕೊಟ್ಟಿದ್ದರು.

ಸೋಮವಾರ ಸಂಜೆ 7.30ರ ವೇಳೆಗೆ ಉಮರ್ ಹಾಗೂ ಯೂನಸ್ ಇಬ್ರೂ ಬೈಕ್ ಏರಿ ಮನೆ ಕಡೆಗೆ ಹೊರಟಿದ್ರು. ಆಗ ಉಮರ್ ಬೈಕ್ ಓಡಿಸುತ್ತ ಸ್ಟಂಟ್ ಮಾಡಲು ಆರಂಭಿಸಿದ್ದ. ಸಿಕ್ಕಾಪಟ್ಟೆ ಸ್ಪೀಡ್ ನಲ್ಲಿದ್ದ ಕಾರಣ ನಿಯಂತ್ರಣ ತಪ್ಪಿ ಬೈಕ್ ಮಗುಚಿಕೊಂಡಿದೆ. ಕೆಳಕ್ಕೆ ಬಿದ್ದ ಇಬ್ಬರಿಗೂ ತೀವ್ರ ಗಾಯಗಳಾಗಿತ್ತು.

ಕೂಡಲೇ ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯ್ತು. ಆದ್ರೆ ಉಮರ್ ಅಲ್ಲೇ ಸಾವನ್ನಪ್ಪಿದ್ದಾನೆ. ಇನ್ನೊಂದು ಘಟನೆಯಲ್ಲಿ ದೆಹಲಿಯ ಮಂಗೋಲ್ಪುರಿಯಲ್ಲಿ ಕೆಟಿಎಂ ಬೈಕ್ ಒಂದಕ್ಕೆ ಸ್ವಿಫ್ಟ್ ಕಾರು ಡಿಕ್ಕಿಯಾಗಿ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...