alex Certify
ಕನ್ನಡ ದುನಿಯಾ       Mobile App
       

Kannada Duniya

ಗೆಳೆಯರೊಂದಿಗೆ ಪಾರ್ಟಿಗೆ ಹೋದವಳಿಗೇನಾಯ್ತು..?

ನವದೆಹಲಿ: ಬರ್ತಡೇ ಪಾರ್ಟಿ ಮುಗಿಸಿ ಸ್ನೇಹಿತರೊಂದಿಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾಳೆ.

ಉತ್ತರ ದೆಹಲಿಯ ಸಾರಾಯ್ ರೋಹಿಲ್ಲಾ ನಿವಾಸಿ 17 ವರ್ಷದ ಪ್ರಿಯಾ ಶುಕ್ಲಾ ಮೃತಪಟ್ಟ ವಿದ್ಯಾರ್ಥಿನಿ. ಅಪಘಾತದ ಬಳಿಕ ಆಕೆಯ ಜೊತೆಗಿದ್ದ ಸ್ನೇಹಿತರು ಪರಾರಿಯಾಗಿದ್ದಾರೆ.

12 ನೇ ತರಗತಿ ಓದುತ್ತಿದ್ದ ಪ್ರಿಯಾ ಶುಕ್ಲಾ ಹುಟ್ಟುಹಬ್ಬದ ಪಾರ್ಟಿ ಮುಗಿಸಿ ಬರುವಾಗ, ಅತಿವೇಗವಾಗಿ ಕಾರ್ ಚಾಲನೆ ಮಾಡಿಕೊಂಡು ಬಂದಿದ್ದು, ಅಡ್ಡಾದಿಡ್ಡಿ ಚಲಿಸಿದ ಕಾರ್, ಬೇರೆ ವಾಹನಗಳಿಗೆ ಡಿಕ್ಕಿ ಹೊಡೆದು ಡಿವೈಡರ್ ಗೆ ಗುದ್ದಿದೆ. ಪ್ರಿಯಾ ಶುಕ್ಲಾ ಸಾವನ್ನಪ್ಪಿದ್ದು, ಬರ್ತಡೇ ಬಾಯ್ ದೇವ್ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ. ಅವರೊಂದಿಗೆ ಇದ್ದ ಇಬ್ಬರು ಸ್ನೇಹಿತರು ಪರಾರಿಯಾಗಿದ್ದಾರೆ.

ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಅಪಘಾತಕ್ಕೀಡಾದ ಕಾರ್ ಹುಂಡೈ ಕಾರ್ ಡಿವೈಡರ್ ಗೆ ಡಿಕ್ಕಿ ಹೊಡೆದು ತಲೆಕೆಳಗಾಗಿ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...