alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್! ಮಗಳ ಮೇಲೆ ಅತ್ಯಾಚಾರವೆಸಗಿದ್ದವರಿಂದಲೇ ಹಣ ತಿಂದ ಪೋಷಕರು…!

ಅತ್ಯಾಚಾರ ಆರೋಪಿಗಳಿಂದ ತನ್ನ ಪೋಷಕರು 5 ಲಕ್ಷ ಹಣವನ್ನು ಪಡೆದು ಕೋರ್ಟ್ ನಲ್ಲಿ ಹೇಳಿಕೆ ತಿರುಚುವಂತೆ ತನ್ನನ್ನು ಒತ್ತಾಯಿಸುತ್ತಿದ್ದಾರೆಂದು ಅತ್ಯಾಚಾರಕ್ಕೊಳಗಾಗಿರುವ 16 ವರ್ಷದ ಸಂತ್ರಸ್ತೆ ದೆಹಲಿ ಪೊಲೀಸರಿಗೆ ದೂರು ನೀಡಿದ್ದಾಳೆ.

ಕಳೆದ ವರ್ಷ ಮಗಳು ಕಾಣೆಯಾಗಿದ್ದಾಳೆಂಬ ಬಗ್ಗೆ ಪೋಷಕರು ದೂರು ನೀಡಿದ್ದರು. ಇದಾದ ಒಂದು ವಾರದ ಬಳಿಕ ಆಕೆ ಮರಳಿ ಬಂದಿದ್ದು, ಇಬ್ಬರು ವ್ಯಕ್ತಿಗಳು ದೆಹಲಿಯ ಅಮನ್ ವಿಹಾರ್ ಪ್ರದೇಶದಲ್ಲಿ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾಗಿ ಹೇಳಿಕೆ ನೀಡಿದ್ದಳು. ಬಳಿಕ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದರು.

ಇದಾದ ಬಳಿಕ ಈಗ ಪೋಷಕರೇ ಆರೋಪಿಗಳಿಂದ ಹಣ ತೆಗೆದುಕೊಂಡಿದ್ದರ ಬಗ್ಗೆ ದೆಹಲಿ ಪೊಲೀಸರಿಗೆ ಆಕೆ ದೂರಿದ್ದಾಳೆ. ಈ ಹಿನ್ನೆಲೆಯಲ್ಲಿ ಆಕೆಯ ತಾಯಿಯನ್ನು ಪೊಲೀಸರು ಬಂಧಿಸಿದ್ದು, ತಪ್ಪಿಸಿಕೊಂಡಿರುವ ತಂದೆಯ ಹುಡುಕಾಟದಲ್ಲಿ ತೊಡಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...