alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕ್ಯಾಬ್ ಚಾಲಕನಿಗೆ ಹೇಳಿ ಹ್ಯಾಟ್ಸಾಫ್

cab-deli

ನವದೆಹಲಿ: ಬೆಲೆಬಾಳುವ ವಸ್ತು ಸಿಕ್ಕ ಸಂದರ್ಭದಲ್ಲಿ ಪ್ರಾಮಾಣಿಕತೆ ಮಾಯವಾಗಿ ಬಿಡುತ್ತದೆ. ಸಿಕ್ಕ ವಸ್ತುಗಳು ನಮಗಿರಲಿ ಎಂದುಕೊಳ್ಳುವವರೇ ಜಾಸ್ತಿ.

ಹೀಗಿರುವಾಗ, ಕೈಗೆ ಸಿಕ್ಕಿದ್ದ ಬರೋಬ್ಬರಿ 8 ಲಕ್ಷ ರೂ. ಮೌಲ್ಯದ ನಗದು, ಚಿನ್ನಾಭರಣ, ವಸ್ತುಗಳನ್ನು ವಾರಸುದಾರರಿಗೆ ಹಿಂತಿರುಗಿಸಿ ಕ್ಯಾಬ್ ಚಾಲಕನೊಬ್ಬ ಪ್ರಾಮಾಣಿಕತೆ ಮೆರೆದಿದ್ದಾನೆ.

24 ವರ್ಷದ ದೇವೇಂದ್ರ ಕಪ್ರಿ ದೆಹಲಿ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ಆಗಮಿಸಿ ಬ್ಯಾಗ್ ಕೊಟ್ಟಿದ್ದಾನೆ. ಕ್ಯಾಬ್ ನಲ್ಲಿ ಪ್ರಯಾಣಿಸಿದ್ದ ವ್ಯಕ್ತಿಯೊಬ್ಬರು ಇದನ್ನು ಬಿಟ್ಟು ಹೋಗಿದ್ದಾಗಿ ಹೇಳಿದ್ದಾನೆ.

ಬ್ಯಾಗ್ ನಲ್ಲಿ ಆಪಲ್ ಐಫೋನ್, ಕ್ಯಾಮೆರಾ, ಚಿನ್ನಾಭರಣ, ಲ್ಯಾಪ್ ಟಾಪ್, ನಗದು ಮೊದಲಾದ ಸುಮಾರು 8 ಲಕ್ಷ ರೂ ಬೆಲೆ ಬಾಳುವ ವಸ್ತುಗಳಿದ್ದವು. ಅವುಗಳನ್ನೆಲ್ಲಾ ಪೊಲೀಸರಿಗೆ ಒಪ್ಪಿಸಿದ ದೇವೇಂದ್ರ, ಯಾವುದಕ್ಕೂ ಇರಲಿ ಎಂದು ಪೊಲೀಸರಿಂದ ದಾಖಲೆ ಪಡೆದುಕೊಂಡಿದ್ದಾನೆ.

ಪೊಲೀಸರು ವಾರಸುದಾರರನ್ನು ಪತ್ತೆ ಮಾಡಿ ಬ್ಯಾಗ್ ಒಪ್ಪಿಸಿದ್ದಾರೆ. ಕ್ಯಾಬ್ ಚಾಲಕ ದೇವೇಂದ್ರನ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...