alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಲೇಜಿನಲ್ಲಿ ಸಿಗಲಿದೆ ಕಲಿಕಾ ಚಾಲನಾ ಪರವಾನಗಿ

ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ವಿದ್ಯಾರ್ಥಿಗಳಿಗೆ ಖುಷಿ ಸುದ್ದಿ ನೀಡಿದೆ. ಇನ್ಮುಂದೆ ಆರ್ ಟಿ ಓ ಮುಂದೆ ಕಾಲೇಜು ವಿದ್ಯಾರ್ಥಿಗಳು ಕಲಿಕಾ ಚಾಲನಾ ಪರವಾನಿಗೆಗಾಗಿ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ. ಕಾಲೇಜಿನಲ್ಲಿಯೇ ವಿದ್ಯಾರ್ಥಿಗಳಿಕೆ ಕಲಿಕಾ ಚಾಲನಾ ಪರವಾನಿಗೆ ಸಿಗಲಿದೆ.

ದೆಹಲಿಯ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಈ ವಿಷ್ಯವನ್ನು ತಿಳಿಸಿದ್ದಾರೆ. ಇನ್ಮುಂದೆ ದೆಹಲಿ ಕಾಲೇಜಿನಲ್ಲಿಯೇ ಕಲಿಕಾ ಚಾಲನಾ ಪರವಾನಿಗೆ ಸಿಗಲಿದೆ. ಇದ್ರಿಂದ 2 ಲಕ್ಷ ವಿದ್ಯಾರ್ಥಿಗಳಿಗೆ ಲಾಭವಾಗಲಿದೆ ಎಂದು ಅವ್ರು ತಿಳಿಸಿದ್ದಾರೆ. ಯುವಕರು ಹಾಗೂ ದೆಹಲಿಯಲ್ಲಿ ವಿದ್ಯಾಭ್ಯಾಸ ಮಾಡ್ತಿರುವ ವಿದ್ಯಾರ್ಥಿಗಳು ಶೀಘ್ರವೇ ಕಲಿಕಾ ಚಾಲನಾ ಪರವಾನಿಗೆ ಪಡೆಯಿರಿ ಎಂದು ಟ್ವಿಟ್ ಮಾಡಿದ್ದಾರೆ.

ಕೆಲವೇ ದಿನಗಳವರೆಗೆ ಕಾಲೇಜಿನಲ್ಲಿ ಕಲಿಕಾ ಚಾಲನಾ ಪರವಾನಿಗೆ ನೀಡಲು ನಿರ್ಧರಿಸಲಾಗಿದೆ. ಇದ್ರಿಂದ ಭ್ರಷ್ಟಾಚಾರ ಕಡಿಮೆಯಾಗಿ, ಸಾಮಾನ್ಯ ಜನರ ಜೀವನ ಸುಲಭವಾಗಲಿದೆ ಎಂದು ಕೈಲಾಶ್ ಟ್ವಿಟ್ ಮಾಡಿದ್ದಾರೆ.

ಕೆಲ ವರ್ಷಗಳ ಹಿಂದೆ ದೆಹಲಿ ವಿಶ್ವವಿದ್ಯಾನಿಲಯದ ಅಡಿ ಬರುವ ದೌಲತ್ ರಾಮ್ ಕಾಲೇಜಿನಲ್ಲಿ ಈ ವ್ಯವಸ್ಥೆ ಶುರು ಮಾಡಲಾಗಿತ್ತು. ಈ ವೇಳೆ 400 ವಿದ್ಯಾರ್ಥಿಗಳು ಒಂದೇ ದಿನ ಕಲಿಕಾ ಚಾಲನಾ ಪರವಾನಿಗೆ ಪಡೆದಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...