alex Certify
ಕನ್ನಡ ದುನಿಯಾ       Mobile App
       

Kannada Duniya

ಶಿಕ್ಷಕಿಯನ್ನು ಶೌಚಾಲಯದಲ್ಲಿ ಕೂಡಿ ಹಾಕಿದ ಬಾಲಕ ಕೇಳಿದ್ದೇನು..?

teacher

ದೆಹಲಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯೊಬ್ಬಳನ್ನು ಸುಮಾರು 15 ನಿಮಿಷಗಳ ವರೆಗೆ ವಾಶ್ ರೂಮ್ ನಲ್ಲಿ ಕೂಡಿ ಹಾಕಿದ ವಿದ್ಯಾರ್ಥಿ ಲೈಂಗಿಕ ಸಂಬಂಧ ಬೆಳೆಸುವಂತೆ ಬೆದರಿಸಿದ್ದಾನೆ, ಇಲ್ಲದೇ ಇದ್ರೆ ವಾಶ್ ರೂಮ್ ಬಾಗಿಲು ತೆರೆಯುವುದಿಲ್ಲ ಅಂತಾ ಹೇಳಿದ್ದಾನೆ. ಮಂಗಳವಾರ ಮಧ್ಯಾಹ್ನ 12.50ರ ವೇಳೆಗೆ ಈ ಘಟನೆ ನಡೆದಿದೆ.

44 ವರ್ಷದ ಶಿಕ್ಷಕಿ ಶೌಚಾಲಯಕ್ಕೆ ತೆರಳಿದ್ಲು. ಹೊರಗಿನಿಂದ ಯಾರೋ ಚಿಲಕ ಹಾಕಿದ ಸದ್ದು ಆಕೆಗೆ ಕೇಳಿಸಿದೆ. ಬಾಗಿಲು ತೆರೆಯುವಂತೆ ಆಕೆ ಮನವಿ ಮಾಡಿದ್ದಾಳೆ. ಆದ್ರೆ ವಿದ್ಯಾರ್ಥಿ ಶಿಕ್ಷಕಿಯನ್ನೇ ನಿಂದಿಸಲು ಶುರು ಮಾಡಿದ್ದ. ಕೊನೆಗೆ ತನ್ನ ಜೊತೆ ಲೈಂಗಿಕ ಸಂಬಂಧ ಹೊಂದಿದ್ರೆ ಮಾತ್ರ ಶೌಚಾಲಯದ ಬಾಗಿಲು ತೆರೆಯುವುದಾಗಿ ಬೇಡಿಕೆ ಇಟ್ಟಿದ್ದಾನೆ.

ಕೂಡಲೇ ಶಿಕ್ಷಕಿ ಸಹಾಯಕ್ಕಾಗಿ ಕೂಗಿಕೊಂಡ್ರು, ಆಗ ವಿದ್ಯಾರ್ಥಿ ಸ್ಥಳದಿಂದ ಓಡಿ ಹೋಗಿದ್ದಾನೆ. ಈ ಕೃತ್ಯ ಎಸಗಿದ ವಿದ್ಯಾರ್ಥಿ ಯಾರು ಅನ್ನೋದು ಇದುವರೆಗೂ ಪತ್ತೆಯಾಗಿಲ್ಲ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ವಿವೇಕ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...