alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಡಹಗಲೇ ಶಾಲಾ ಬಸ್ ಅಡ್ಡಗಟ್ಟಿ 1ನೇ ತರಗತಿ ವಿದ್ಯಾರ್ಥಿ ಅಪಹರಣ

ದೆಹಲಿಯಲ್ಲಿ ಹಾಡಹಗಲೇ 1ನೇ ತರಗತಿಯ ಬಾಲಕನನ್ನು ಅಪಹರಿಸಲಾಗಿದೆ. ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ವಿದ್ಯಾರ್ಥಿಗಳಿದ್ದ ಶಾಲಾ ಬಸ್ ಅನ್ನು ಅಡ್ಡ ಹಾಕಿದ್ರು. ನಂತರ ಬಸ್ ಚಾಲಕನತ್ತ ಗುಂಡು ಹಾರಿಸಿ, ಬಾಲಕನನ್ನು ಹೊತ್ತೊಯ್ದಿದ್ದಾರೆ.

ದೆಹಲಿಯ ದಿಲ್ಷಾದ್ ಗಾರ್ಡನ್ ಬಳಿ ಈ ದುಷ್ಕೃತ್ಯ ನಡೆದಿದೆ. ಸ್ಕೂಲ್ ಬಸ್ ನಲ್ಲಿ ಸುಮಾರು 25 ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ರು. ಬೆಳಗ್ಗೆ ಸುಮಾರು 8 ಗಂಟೆ ವೇಳೆಗೆ ಈ ಘಟನೆ ನಡೆದಿದೆ. ಮಕ್ಕಳನ್ನು ಕರೆದುಕೊಂಡು ಬಸ್ ಶಾಲೆಗೆ ತೆರಳುತ್ತಿತ್ತು.

ಮೊದಲೇ ಆ ಮಗುವಿನ ಬಗ್ಗೆ ತಿಳಿದುಕೊಂಡು ದುಷ್ಕರ್ಮಿಗಳು ಅಪಹರಣಕ್ಕೆ ಸಂಚು ಮಾಡಿದ್ದರು ಅಂತಾ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಗಣರಾಜ್ಯೋತ್ಸವಕ್ಕಾಗಿ ರಾಜಧಾನಿ ದೆಹಲಿಯಲ್ಲಿ ಭಾರೀ ಭದ್ರತೆ ಏರ್ಪಡಿಸಲಾಗಿದೆ. ಆದ್ರೂ ಮಗುವಿನ ಅಪಹರಣ ನಡೆದಿರೋದು ಆತಂಕ ಮೂಡಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...