alex Certify
ಕನ್ನಡ ದುನಿಯಾ       Mobile App
       

Kannada Duniya

ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ ಮನುಕುಲವೇ ತಲೆ ತಗ್ಗಿಸುವ ಘಟನೆ

ಎಂಟು ದಿನಗಳ ಕಾಲ ಹಸಿವೆಯಿಂದ ಬಳಲಿದ ಮೂವರು ಕಂದಮ್ಮಗಳು ಸಾವನ್ನಪ್ಪಿರುವ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

ಎಂಟು, ನಾಲ್ಕು ಹಾಗೂ ಎರಡು ವರ್ಷದ ಒಂದೇ ಕುಟುಂಬದ ಮೂವರು ಹೆಣ್ಣು ಮಕ್ಕಳು ಹಸಿವೆಯನ್ನು ತಾಳಲಾರದೆ ಕೊನೆಗೆ ಅಸುನೀಗಿವೆ. ಮಕ್ಕಳನ್ನು ಮಂಗಳವಾರ ಬೆಳಗ್ಗೆ ತಾಯಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ, ವೈದ್ಯರು ತಪಾಸಣೆ ನಡೆಸಿ ಸಾವನ್ನಪ್ಪಿರುವ ಬಗ್ಗೆ ಧೃಡಪಡಿಸಿದ್ದಾರೆ.

ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮೂವರು ಸಹೋದರಿಯರ ಹೊಟ್ಟೆ ಸಂಪೂರ್ಣ ಖಾಲಿಯಿದ್ದು, ಎಂಟು ದಿನದಿಂದ ಒಂದು ಹೊತ್ತು ಊಟ ಮಾಡದಿರುವುದು ಸಾಬೀತಾಗಿದೆ. ಮಕ್ಕಳು ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿದ್ದರು ಎಂಬ ಮಾಹಿತಿ ವರದಿಯಲ್ಲಿದೆ.

ಇನ್ನು ಈ ಘಟನೆಯ ಕುರಿತಾಗಿ ಮಕ್ಕಳ ತಾಯಿಯನ್ನು ಪೊಲೀಸರು ವಿಚಾರಿಸಿದಾಗ, ಮಕ್ಕಳು ಊಟ ನೀಡುವಂತೆ ಕೇಳಿಕೊಂಡಿದ್ದವು ಎಂದು ತಿಳಿದು ಬಂದಿದೆ.

ಈ ಕುಟುಂಬ ಪಶ್ಚಿಮ ಬಂಗಾಳದಿಂದ ದೆಹಲಿಗೆ ಶನಿವಾರ ಬಂದಿತ್ತು. ಕುಟುಂಬದ ಯಜಮಾನನ ಆಟೋ ಕಳ್ಳತನವಾಗಿದ್ದರಿಂದ, ಕೆಲಸ ಹುಡುಕಿಕೊಂಡು ಪತ್ನಿ ಹಾಗೂ ಮೂವರು ಮಕ್ಕಳ ಸಮೇತ ದೆಹಲಿಗೆ ಬಂದಿದ್ದರು. ಕೆಲಸ ಹುಡುಕಿಕೊಂಡ ಹೋದ ಪತಿ ಇನ್ನೂ ಪತ್ತೆಯಾಗಿಲ್ಲ. ಮೃತ ಮಕ್ಕಳ ತಾಯಿ ಮಾನಸಿಕ ಅಸ್ವಸ್ಥರಂತೆ ಕಾಣುತ್ತಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...