alex Certify
ಕನ್ನಡ ದುನಿಯಾ       Mobile App
       

Kannada Duniya

ರೋಗಿ ಸಂಬಂಧಿಕನನ್ನೇ ಥಳಿಸಿ ಕೊಂದ ಆಸ್ಪತ್ರೆ ಸಿಬ್ಬಂದಿ

ಆಸ್ಪತ್ರೆಗಳು ಇರೋದು ಜನರ ಪ್ರಾಣ ಉಳಿಸೋಕೆ. ಆದ್ರೆ ದೆಹಲಿಯ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ರೋಗಿಯ ಸಂಬಂಧಿಕನ ಪ್ರಾಣ ತೆಗೆದಿದ್ದಾರೆ. ಸೋನು ಮಣಿರಾಂ ಎಂಬಾತ ಅನಾರೋಗ್ಯ ಪೀಡಿತ ಪತ್ನಿ ರಾಧಿಕಾಳನ್ನು ರಾವ್ ತುಲಾರಾಮ್ ಆಸ್ಪತ್ರೆಗೆ ಕರೆತಂದಿದ್ದ.

ರಾಧಿಕಾ ಮೊದಲೇ ವಿಕಲ ಚೇತನೆ. ಚಿಕಿತ್ಸೆ ವೇಳೆ ನೋವಿನಿಂದ ಕಿರುಚಿಕೊಳ್ಳುತ್ತಿದ್ಲು. ಅದನ್ನು ಕೇಳಲಾಗದೇ ಸೋನು, ಆಸ್ಪತ್ರೆ ಸಿಬ್ಬಂದಿ ಮೇಲೆ ಹರಿಹಾಯ್ದಿದ್ದಾನೆ. ಕೂಡಲೇ ಆತನನ್ನು ಬೇರೆ ಕೋಣೆಗೆ ಕರೆದೊಯ್ದ ವೈದ್ಯರು ಹಾಗೂ ಸಿಬ್ಬಂದಿ ಚೆನ್ನಾಗಿ ಥಳಿಸಿದ್ದಾರೆ.

ಅಷ್ಟೇ ಅಲ್ಲ ಪೊಲೀಸರಿಗೂ ದೂರು ನೀಡಿದ್ದಾರೆ. ಸಂಜೆಯಾಗುವಷ್ಟರಲ್ಲಿ ಥಳಿತಕ್ಕೊಳಗಾಗಿದ್ದ ಸೋನು ದೇಹಸ್ಥಿತಿ ಬಿಗಡಾಯಿಸಿತ್ತು. ಆತ ಮೃತಪಟ್ಟಿದ್ದಾನೆ. ಆದ್ರೆ ಆತನ ಮೇಲೆ ಹಲ್ಲೆ ನಡೆದಿಲ್ಲ ಅಂತಾ ಆಸ್ಪತ್ರೆಯ ಮುಖ್ಯಸ್ಥರು ಹೇಳ್ತಿದ್ದಾರೆ. ಆತ ಕುಡಿದು ಬಂದು ಗಲಾಟೆ ಮಾಡಿದ್ದ ಅಂತಾ ವಾದಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...