alex Certify
ಕನ್ನಡ ದುನಿಯಾ       Mobile App
       

Kannada Duniya

ಶುಲ್ಕ ನೀಡದ 5 ವರ್ಷದ ಮಕ್ಕಳಿಗೆ ಶಾಲೆಯಲ್ಲಿ ಸಿಕ್ತು ಇಂಥ ಶಿಕ್ಷೆ

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಶಾಲೆಯೊಂದು 50 ವಿದ್ಯಾರ್ಥಿಗಳನ್ನು ನೆಲ ಮಾಳಿಗೆಯಲ್ಲಿ ಕೂಡಿ ಹಾಕಿದ ಘಟನೆ ನಡೆದಿದೆ. ವಿದ್ಯಾರ್ಥಿನಿಯರ ಪಾಲಕರು ಶಾಲೆಯ ಶುಲ್ಕ ಪಾವತಿ ಮಾಡದಿರುವುದೇ ಇದಕ್ಕೆ ಕಾರಣವಾಗಿದೆ.

ಘಟನೆ ದೆಹಲಿಯ ಚಾಂದನಿ ಚೌಕ್ ನ ರಬೀಯಾ ಗರ್ಲ್ಸ್ ಪಬ್ಲಿಕ್ ಸ್ಕೂಲಿನಲ್ಲಿ ನಡೆದಿದೆ. ಸುಮಾರು 4ರಿಂದ 5 ಗಂಟೆಗಳ ಕಾಲ ವಿದ್ಯಾರ್ಥಿನಿಯರನ್ನು ಕೂಡಿ ಹಾಕಿದ್ದರು ಎನ್ನಲಾಗಿದೆ. ಐದು ವರ್ಷದ ವಿದ್ಯಾರ್ಥಿನಿಯರ ಜೊತೆ ಶಾಲಾ ಆಡಳಿತ ಮಂಡಳಿ ಕೆಟ್ಟದಾಗಿ ನಡೆದುಕೊಂಡಿದೆ.

ಬೆಳಿಗ್ಗೆ 7.30 ಕ್ಕೆ ವಿದ್ಯಾರ್ಥಿನಿಯರನ್ನು ನೆಲ ಮಾಳಿಗೆಯಲ್ಲಿ ಕೂಡಿ ಹಾಕಲಾಗಿದೆ. ಶಾಲೆ ಸಮಯ ಮುಗಿದ ನಂತ್ರ ಪಾಲಕರಿಗೆ ವಿಷ್ಯ ಗೊತ್ತಾಗಿದೆ. ವಿದ್ಯಾರ್ಥಿನಿಯರು ಶಾಲೆಗೆ ಗೈರಾಗಿದ್ದಾರೆಂದು ದಾಖಲೆ ಪತ್ರದಲ್ಲಿ ನಮೂದಿಸಿಕೊಂಡು ನೆಲ ಮಾಳಿಗೆಗೆ ಕಳುಹಿಸಲಾಗಿದೆ. ಆಡಳಿತ ಮಂಡಳಿಗೆ ಶುಲ್ಕ ಸಿಗದ ಕಾರಣ ಹೀಗೆ ಮಾಡಲಾಗಿದೆ ಎಂದು ಶಾಲಾ ಸಿಬ್ಬಂದಿ ಹೇಳಿದೆ.

ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಶುರು ಮಾಡಿದ್ದಾರೆ. ನೆಲ ಮಾಳಿಗೆಯಲ್ಲಿ ಸಂಗೀತ, ಆಟ ಸೇರಿದಂತೆ ಪಠ್ಯೇತರ ಚಟುವಟಿಕೆ ನಡೆಯುತ್ತದೆ. ಹಾಗಾಗಿ ವಿದ್ಯಾರ್ಥಿಗಳನ್ನು ಅಲ್ಲಿಗೆ ಕಳುಹಿಸಲಾಗಿತ್ತು ಎಂದಿರುವ ಪ್ರಾಂಶುಪಾಲರು ಆರೋಪವನ್ನು ತಳ್ಳಿಹಾಕಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...