alex Certify
ಕನ್ನಡ ದುನಿಯಾ       Mobile App
       

Kannada Duniya

ಹಣ ಕದ್ದು ಈತ ಮಾಡ್ತಿದ್ದ ಕೆಲಸ ನೋಡಿ ದಂಗಾದ ಪೊಲೀಸ್

man

ರಾಷ್ಟ್ರ ರಾಜಧಾನಿ ದೆಹಲಿಯ ಶ್ರೀಮಂತ ಕಾಲೋನಿಯಲ್ಲಿ ವಾಸವಿರುವ ಶ್ರೀಮಂತ ಮನೆಗೆ ಕನ್ನ ಹಾಕ್ತಿದ್ದ ಈತ ಬಿಹಾರದಲ್ಲಿರುವ ತನ್ನ ಗ್ರಾಮದ ಬಡವರಿಗೆ ಹಂಚುತ್ತಿದ್ದ. ಅನೇಕ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡುತ್ತಿದ್ದನಲ್ಲದೆ ಬಡವರ ಮದುವೆಗೆ ಹಣ ನೀಡಿದ್ದ. ತಾನು ರಾಬಿನ್ ಹುಡ್ ಎಂದುಕೊಂಡಿದ್ದ ಈತನನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸ್ ಮಾಹಿತಿ ಪ್ರಕಾರ, 27 ವರ್ಷದ ಇರ್ಫಾನ್ ಅಲಿಯಾಸ್ ಉಜಾಲಾ ಅಲಿಯಾಸ್ ಆರ್ಯನ್  ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೋನಿ, ಜಾಮಿಯಾ ನಗರ್, ಲಜಪತ್ ನಗರ್ ಸೇರಿದಂತೆ ಅನೇಕ ಕಾಲೋನಿಗಳಲ್ಲಿ 12ಕ್ಕೂ ಹೆಚ್ಚು ಮನೆಗಳಿಗೆ ಕನ್ನ ಹಾಕಿದ್ದಾನೆ.

ನ್ಯೂ ಫ್ರೆಂಡ್ಸ್ ಕಾಲೋನಿಯಲ್ಲಿ ಮಾಡಿದ ಕಳ್ಳತನದ ವೇಳೆ ಈತನ ಮುಖ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಹೆಚ್ಚಿನ ಮಾಹಿತಿ ಕಲೆ ಹಾಕಿದಾಗ ಆತ ಬಿಹಾರ್ ಮೂಲದವನು ಎಂಬುದು ಪೊಲೀಸರಿಗೆ ತಿಳಿದು ಬಂದಿದೆ. ಬಿಹಾರ್ ಗೆ ಹೋದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸ್ಥಳೀಯರು ಇರ್ಫಾನ್ ನನ್ನು ಸಾಮಾಜಿಕ ಕಾರ್ಯಕರ್ತ ಎಂದಿದ್ದಾರೆ. ಇರ್ಫಾನ್ ಕದ್ದ ಮಾಲನ್ನು ಖರೀದಿ ಮಾಡ್ತಿದ್ದ ವ್ಯಕ್ತಿಯನ್ನೂ ಪೊಲೀಸರು ಬಂಧಿಸಿದ್ದಾರೆ. 25 ಲಕ್ಷ ಮೌಲ್ಯದ ಬಂಗಾರವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದೆಹಲಿ ನೈಟ್ ಕ್ಲಬ್ ಒಂದರಲ್ಲಿ ತನ್ನ ನೆಚ್ಚಿನ ಹಾಡು ಹಾಡಲು 10 ಸಾವಿರ ರೂಪಾಯಿ ಕೊಟ್ಟಿದ್ದ ಈತ. ಮಾರುಕಟ್ಟೆಗೆ ಬರುವ ಹೊಸ ಕಾರ್ ಈತನ ಕೈನಲ್ಲಿರುತ್ತಿತ್ತು. ಐಷಾರಾಮಿ ಜೀವನ ನಡೆಸುತ್ತಿದ್ದ ಇರ್ಫಾನ್ ಬಡ ಜನರಿಗೆ ಹಣ ದಾನ ಕೂಡ ಮಾಡ್ತಿದ್ದ. ಬೋಜ್ಪುರಿ ಸಿನಿಮಾ ನಟಿ ಈತನ ಗರ್ಲ್ ಫ್ರೆಂಡ್. ಆಕೆಗಾಗಿಯೂ ಸಿಕ್ಕಾಪಟ್ಟೆ ಖರ್ಚು ಮಾಡಿದ್ದಾನೆ ಇರ್ಫಾನ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...