alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಣೆಯಾಗಿದ್ದ 3000 ಮಕ್ಕಳನ್ನು 4 ದಿನಗಳಲ್ಲಿ ಪತ್ತೆ ಮಾಡಿದೆ ಈ ಟೆಕ್ನಾಲಜಿ

ಇದು ತಂತ್ರಜ್ಞಾನ ಯುಗ. ಪ್ರತಿಯೊಂದು ಕೆಲಸವೂ ನಡೆಯೋದು ಟೆಕ್ನಾಲಜಿಯಿಂದ್ಲೇ. ಹೊಸದಾಗಿ ಬಂದಿರೋ ಫೇಸ್ ರೆಕಗ್ನಿಶನ್ ಟೆಕ್ನಾಲಜಿಯಿಂದ ಸಾಕಷ್ಟು ಸಹಾಯವಾಗ್ತಿದೆ. ಕಾಣೆಯಾಗಿರುವವರನ್ನು ಪತ್ತೆ ಮಾಡಲು ಇದು ಸಹಕಾರಿಯಾಗಿದೆ.

ದೆಹಲಿ ಹೈಕೋರ್ಟ್ ಸೂಚನೆ ಮೇರೆಗೆ ಅಲ್ಲಿನ ಪೊಲೀಸರು ಕಾಣೆಯಾಗಿರೋ ಮಕ್ಕಳನ್ನು ಹುಡುಕಲು ಫೇಸ್ ರೆಕಗ್ನಿಶನ್ ತಂತ್ರಜ್ಞಾನ ಬಳಸುತ್ತಿದ್ದಾರೆ. ಈ ಟೆಕ್ನಾಲಜಿ ಸಹಾಯದಿಂದ ಕೇವಲ 4 ದಿನಗಳಲ್ಲೇ ಕಾಣೆಯಾಗಿದ್ದ ಸುಮಾರು 3000 ಮಕ್ಕಳನ್ನು ಪತ್ತೆ ಮಾಡಲಾಗಿದೆ.

ಅಷ್ಟೇ ಅಲ್ಲ ಅವರನ್ನು ಸುರಕ್ಷಿತವಾಗಿ ಹೆತ್ತವರಿಗೆ ಒಪ್ಪಿಸಲಾಗಿದೆ. ದೆಹಲಿಯಲ್ಲಿ ಸುಮಾರು 45,000 ಮಕ್ಕಳು ವಿವಿಧ ಅನಾಥಾಲಯಗಳಲ್ಲಿ, ಸರ್ಕಾರದ ಆಶ್ರಯ ತಾಣಗಳಲ್ಲಿ ವಾಸಿಸುತ್ತಿದ್ದಾರೆ. ಅವರ ಪೈಕಿ 3000 ಮಕ್ಕಳು ಈಗ ಮನೆ ಸೇರಿದ್ದಾರೆ.

ಫೇಸ್ ರೆಕಗ್ನಿಶನ್ ಟೆಕ್ನಾಲಜಿಯ ಸಾಫ್ಟ್ ವೇರ್ ಇದ್ದರೂ ದೆಹಲಿ ಪೊಲೀಸರು ಅದನ್ನು ಪ್ರಾಯೋಗಿಕವಾಗಿ ಬಳಸಲು ವಿಫಲವಾಗಿದ್ದರು. ಹಾಗಾಗಿ ದೆಹಲಿ ಹೈಕೋರ್ಟ್ ಪೊಲೀಸ್ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...