alex Certify
ಕನ್ನಡ ದುನಿಯಾ       Mobile App
       

Kannada Duniya

6 ವರ್ಷಗಳ ಬಳಿಕ ದಾಖಲಾಯ್ತು ದೂರು

atm_650x400_814489878152011 ರಲ್ಲಿ ಬೆಳಕಿಗೆ ಬಂದಿದ್ದ ವಂಚನಾ ಪ್ರಕರಣದ ದೂರಿಗೆ ಸಂಬಂಧಪಟ್ಟಂತೆ ಬರೋಬ್ಬರಿ 6 ವರ್ಷದ ಬಳಿಕ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ತಾರಾ ರಾವ್ ಎಂಬ ಬೆಂಗಳೂರು ಮೂಲದ ಮಹಿಳೆಯ ಬ್ಯಾಂಕ್ ಖಾತೆಯಲ್ಲಿದ್ದ ಸುಮಾರು 70 ಲಕ್ಷ ರೂಪಾಯಿಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದ್ದು, ಈಗ ಎಫ್ಐಆರ್ ದಾಖಲಿಸಲಾಗಿದೆ.

2008-10 ರ ಅವಧಿಯಲ್ಲಿ ದೆಹಲಿಯಲ್ಲಿದ್ದ ಮಹಿಳೆ ಅಲ್ಲಿನ ಹೆಚ್.ಎಸ್.ಬಿ.ಸಿ. ಬ್ಯಾಂಕ್ ನಲ್ಲಿ ಎರಡು ಖಾತೆಗಳನ್ನು ಹೊಂದಿದ್ದರು. ಜೂನ್ 15,2011 ರಂದು ತಮ್ಮ ಖಾತೆಯ ವಿವರ ಪರಿಶೀಲಿಸಿದ ತಾರಾ ರಾವ್ ಅವರಿಗೆ ಆಘಾತ ಕಾದಿತ್ತು. ಅವರ ಅರಿವಿಗೆ ಬಾರದಂತೆ ಲಕ್ಷಾಂತರ ರೂ. ಗಳ ವಹಿವಾಟು ಅವರ ಖಾತೆಯಲ್ಲಿ ನಡೆದಿತ್ತು.

ಬ್ಯಾಂಕ್ ನ ಅಭಿಷೇಕ್ ರೋಹ್ಟಗಿ ಎಂಬಾತನೇ ಈ ಹಣಕಾಸು ವ್ಯವಹಾರ ನಡೆಸಿರಬಹುದೆಂಬ ಶಂಕೆ ಹೊಂದಿದ್ದ ತಾರಾ ರಾವ್ ಈ ಕುರಿತು ಬ್ಯಾಂಕ್ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಆದರೆ ಆತ ಉದ್ಯೋಗ ತೊರೆದಿರುವುದಾಗಿ ಬ್ಯಾಂಕ್ ನವರು ಹೇಳಿದ್ದರು. ಅಭಿಷೇಕ್ ರೋಹ್ಟಗಿ ತಾರಾ ರಾವ್ ರವರ ನಕಲಿ ಸಹಿ ಮಾಡಿದ್ದಲ್ಲದೇ ಹಣದ ವಹಿವಾಟಿನ ವಿವರ ತನ್ನ ಮೊಬೈಲ್ ನಂಬರ್ ಹಾಗೂ ತಾನು ಸೃಷ್ಟಿಸಿದ್ದ ನಕಲಿ ಇ ಮೇಲ್ ಐಡಿಗೆ ಬರುವಂತೆ ಮಾಡಿಕೊಂಡಿದ್ದ. ಇದೀಗ ಆರು ವರ್ಷದ ಬಳಿಕ ಎಫ್ಐಆರ್ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...