alex Certify
ಕನ್ನಡ ದುನಿಯಾ       Mobile App
       

Kannada Duniya

ಪಿಸ್ತೂಲುಗಳನ್ನು ‘ಹೋಮ್ ಡೆಲಿವರಿ’ ಮಾಡುತ್ತಿದ್ದ ಭೂಪ..!

guns_1454564884

ಆನ್ ಲೈನ್ ಮಾರ್ಕೆಂಟಿಗ್ ನಲ್ಲಿ ಫ್ರಿಡ್ಜ್, ವಾಷಿಂಗ್ ಮೆಷೀನ್ ಸೇರಿದಂತೆ ಗೃಹೋಪಯೋಗಿ ವಸ್ತುಗಳಿಂದ ಹಿಡಿದು ಬೇಕಾದ ಬಹುತೇಕ ಎಲ್ಲ ವಸ್ತುಗಳೂ ಸಿಗುತ್ತವೆ. ಆದರೆ ಇಲ್ಲೊಬ್ಬ ಭೂಪ ಪಿಸ್ತೂಲುಗಳನ್ನೂ ‘ಹೋಮ್ ಡೆಲಿವರಿ’ ಮಾಡುತ್ತಿದ್ದು, ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಮೀರತ್ ಮೂಲದ ಸವೀಂದರ್ ಕುಮಾರ್ ಎಂಬಾತನೇ ದೆಹಲಿ ಪೊಲೀಸರಿಂದ ಬಂಧನಕ್ಕೊಳಗಾದವನಾಗಿದ್ದು, ಈತ ‘ಹೋಮ್ ಡೆಲಿವರಿ’ ಗಾಗಿ ತೆರಳುತ್ತಿದ್ದ ವೇಳೆಯಲ್ಲೇ ರೆಡ್ ಹ್ಯಾಂಡಾಗಿ ಬಂಧಿಸಲಾಗಿದೆ. ಈತನ ಕಾರಿನಲ್ಲಿ ಅಡಗಿಸಿಟ್ಟಿದ್ದ 50 ಪಿಸ್ತೂಲುಗಳು ಹಾಗೂ 100 ಕಾಟ್ರಿಡ್ಜ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜಾರ್ಖಂಡ್ ನ ಧನಬಾದ್ ನಲ್ಲಿ ಅಕ್ರಮ ಪಿಸ್ತೂಲು ತಯಾರಿಕಾ ಕಾರ್ಖಾನೆ ಹೊಂದಿದ್ದ ಸವೀಂದರ್ ಕುಮಾರ್, ಸಾಮಾಜಿಕ ಜಾಲ ತಾಣ ವಾಟ್ಸಾಪ್ ಮೂಲಕ ಪಿಸ್ತೂಲಿಗೆ ಬೇಡಿಕೆ ಸಲ್ಲಿಸುತ್ತಿದ್ದ ಉತ್ತರ ಪ್ರದೇಶ ಹಾಗೂ ಹರಿಯಾಣದ ಕ್ರಿಮಿನಲ್ ಗಳಿಗೆ ಸರಬರಾಜು ಮಾಡುತ್ತಿದ್ದ ಎನ್ನಲಾಗಿದೆ. ‘ಒಂದು ತೆಗೆದುಕೊಂಡರೆ ಮತ್ತೊಂದು ಫ್ರೀ’ ಎನ್ನುವ ಆಫರ್ ಅನ್ನು ತನ್ನ ಗ್ರಾಹಕರಿಗೆ ಸವೀಂದರ್ ಕುಮಾರ್ ನೀಡುತ್ತಿದ್ದ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...