alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಸುಂದರ, ವಿದ್ಯಾವಂತ ಯುವಕ ಮಾಡ್ತಿದ್ದ ಬೆಚ್ಚಿ ಬೀಳಿಸುವಂಥ ಕೃತ್ಯ

27ರ ಹರೆಯದ ಯುವಕ ಸಿದ್ದಾರ್ಥ್ ಮೆಹ್ರೋತ್ರಾ ಒಬ್ಬ ಗ್ರಾಫಿಕ್ ಡಿಸೈನರ್. ನೋಡಲು ಕೂಡ ಸುಂದರವಾಗಿದ್ದಾನೆ. ಅವನನ್ನು ನೋಡಿದವರ್ಯಾರಿಗೂ ಕಳ್ಳನಿರಬಹುದು ಅನ್ನೋ ಅನುಮಾನ ಕೂಡ ಬರೋದು ಅಸಾಧ್ಯ. ಆದ್ರೆ ಇವನೊಬ್ಬ ಹೈಫೈ ಕಳ್ಳ.

ರಾಜಕಾರಣಿಗಳು, ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳೇ ಇವನ ಟಾರ್ಗೆಟ್. ಬ್ಯಾಂಕ್ ಮ್ಯಾನೇಜರ್ ಒಬ್ಬರ ಮಗನಾಗಿರೋ ಸಿದ್ಧಾರ್ಥ್ ಒಳ್ಳೆ ಕುಟುಂಬದಲ್ಲಿ ಹುಟ್ಟಿ ಬೆಳೆದವನು. ಆದ್ರೆ ಮಾಡ್ತಿದ್ದ ಕಾಯಕ ಮಾತ್ರ ಕಳ್ಳತನ. ದೆಹಲಿ ಪೊಲೀಸರು ಈತನನ್ನು ಬಂಧಿಸಿದ್ದಾರೆ.

ಪೀತಂಪುರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸ್ತಾ ಇದ್ದ ಸಿದ್ದಾರ್ಥ್, ಐಷಾರಾಮಿ ಬದುಕು ನಡೆಸ್ತಿದ್ದ. ಫೋರ್ಡ್ ಎಕೋಸ್ಪೋರ್ಟ್ ಕಾರಲ್ಲೇ ಲಡಾಕ್ ಗೆ ಹೋಗಿ ಬಂದಿದ್ದ. ಅವನ ಫೇಸ್ಬುಕ್ ಪ್ರೊಫೈಲ್ ನೋಡಿ ಅನುಮಾನ ಬಂದ ಪೊಲೀಸರು ಮನೆ ಮೇಲೆ ದಾಳಿ ಮಾಡಿದ್ರು.

ಅಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಕದ್ದ ಆಭರಣಗಳು, ವಿವಿಧ ದೇಶಗಳ ಕರೆನ್ಸಿ ನೋಟುಗಳು ಸಿಕ್ಕಿವೆ. ಆತನ ಬಳಿಯಿದ್ದ ಚೆವ್ರೊಲೆಟ್ ಕ್ರೂಝ್ ಕಾರನ್ನು ಕೂಡ ಪೊಲೀಸರು ಜಪ್ತಿ ಮಾಡಿದ್ದಾರೆ. ಇಬ್ಬರು ಸ್ನೇಹಿತರ ಜೊತೆ ಸೇರಿ ಕಳ್ಳತನ ಮಾಡಿದ್ದಾಗಿ ಸಿದ್ದಾರ್ಥ್ ಒಪ್ಪಿಕೊಂಡಿದ್ದಾನೆ. ಅವರಿಬ್ಬರನ್ನು ಕೂಡ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...