alex Certify
ಕನ್ನಡ ದುನಿಯಾ       Mobile App
       

Kannada Duniya

ಪಟಾಕಿ ಮಾರಾಟ ರದ್ದು ತೀರ್ಪಿಗೆ ಪೋಸ್ಟರ್ ಮೂಲಕ ವಿರೋಧ

ದೆಹಲಿ-ಎನ್ ಸಿ ಆರ್ ನಲ್ಲಿ ಪಟಾಕಿ ಮಾರಾಟವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ದೀಪಾವಳಿ ಸಂಭ್ರಮದಲ್ಲಿರುವ ದೆಹಲಿ ಜನರಿಗೆ ಸುಪ್ರೀಂ ಕೋರ್ಟ್ ತೀರ್ಪು ನಿರಾಸೆ ಮೂಡಿಸಿದೆ. ಸುಪ್ರೀಂ ಕೋರ್ಟ್ ತೀರ್ಪನ್ನು ವಿರೋಧಿಸಿರುವ ದೆಹಲಿ ಜನರು ಸೋಮವಾರ ಬೆಳ್ಳಂಬೆಳಿಗ್ಗೆ ದೆಹಲಿಯ ಕೆಲ ಪ್ರದೇಶಗಳಲ್ಲಿ ಪೋಸ್ಟರ್ ಹಾಕಿದ್ದಾರೆ.

ದೆಹಲಿಯ ಪಟೇಲ್ ಚೌಕ್, ಮೆಟ್ರೋ ನಿಲ್ದಾಣ, ಐಟಿಒ ಸೇರಿದಂತೆ ಸದಾ ಪೊಲೀಸ್ ಕಣ್ಗಾವಲಿರುವ ಪ್ರದೇಶದಲ್ಲಿ ಪೋಸ್ಟರ್ ಹಾಕಲಾಗಿದೆ. ಪೋಸ್ಟರ್ ಹಾಕಿರುವವರು ಯಾರೆಂಬುದನ್ನು ಇದ್ರಲ್ಲಿ ಉಲ್ಲೇಖಿಸಿಲ್ಲ. ವಿರೋಧಿ ಸಂದೇಶದ ಕೆಳಗೆ ದೆಹಲಿ ಜನ ಎಂದು ಬರೆಯಲಾಗಿದೆ. ಐಐಟಿ ಕಾನ್ಪುರ ವರದಿ ಪ್ರಕಾರ ದೆಹಲಿಯಲ್ಲಿ ಪಟಾಕಿಗಿಂತ ಬೇರೆ ಕಾರಣಕ್ಕೆ ಮಾಲಿನ್ಯವಾಗ್ತಿದೆ. ನೀವು ಕೇವಲ ಪಟಾಕಿಯನ್ನು ಮಾತ್ರ ಗಮನಕ್ಕೆ ತೆಗೆದುಕೊಂಡಿದ್ದೀರಿ ಎಂದು ಪೋಸ್ಟರ್ ನಲ್ಲಿ ಬರೆಯಲಾಗಿದೆ.

ಸುಪ್ರೀಂ ಕೋರ್ಟ್ ಮುಂದೆ ಸಾಕಷ್ಟು ಪ್ರಕರಣವಿದೆ. ಆದ್ರೆ ಸುಪ್ರೀಂ ಕೋರ್ಟ್ ಹಬ್ಬದ ಬಗ್ಗೆ ತೀರ್ಪು ನೀಡಲು ಮಾತ್ರ ಸಮಯ ಹೊಂದಿಸಿಕೊಳ್ಳುತ್ತಿದೆ ಎನ್ನುವ ಅರ್ಥದ ಪೋಸ್ಟರ್ ಗಳನ್ನೂ ಹಾಕಲಾಗಿದೆ. ಸುಪ್ರೀಂ ಕೋರ್ಟ್ ಕೆಲ ದಿನಗಳ ಹಿಂದಷ್ಟೇ ಪಟಾಕಿ ಮಾರಾಟವನ್ನು ಬ್ಯಾನ್ ಮಾಡಿದೆ. ಅಕ್ಟೋಬರ್ 30ರವರೆಗೆ ದೆಹಲಿ-ಎನ್ ಸಿ ಆರ್ ನಲ್ಲಿ ಪಟಾಕಿ ಮಾರಾಟ ಮಾಡುವಂತಿಲ್ಲ. ಸುಪ್ರೀಂ ಈ ತೀರ್ಪನ್ನು ಕೆಲವರು ಸ್ವಾಗತಿಸಿದ್ರೆ ಮತ್ತೆ ಕೆಲವರು ವಿರೋಧಿಸಿದ್ದಾರೆ. ಇದು ಹಿಂದು ವಿರೋಧಿ ತೀರ್ಪು ಎನ್ನುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...