alex Certify
ಕನ್ನಡ ದುನಿಯಾ       Mobile App
       

Kannada Duniya

ಚಿಕಿತ್ಸೆಗೆ ಹಣವಿಲ್ಲದೆ ಆತ್ಮಹತ್ಯೆ ಮಾಡಿಕೊಂಡ

msid

ಹಳೆ ನೋಟುಗಳ ಮೇಲೆ ನಿಷೇಧ ಹೇರಿದ ನಂತ್ರವೂ ಹಣದ ಕೊರತೆಯಾಗಿಲ್ಲ ಎಂದು ಆರ್ ಬಿ ಐ ಹಾಗೂ ಕೇಂದ್ರ ಸರ್ಕಾರ ಹೇಳ್ತಾ ಇದೆ. ಆದ್ರೆ ವಾಸ್ತವ ಸ್ಥಿತಿ ಬೇರೆ ಇದೆ. ಕೆಲವರು ಊಟಕ್ಕೆ ಹಣವಿಲ್ಲದೆ ಪರದಾಡ್ತಿದ್ದಾರೆ ಮತ್ತೆ ಕೆಲವರು ತಮ್ಮ ಕುಟುಂಬದವರಿಗೆ ಸರಿಯಾಗಿ ಚಿಕಿತ್ಸೆ ನೀಡಲಾಗದೆ ತೊಂದರೆಗೆ ಸಿಲುಕಿದ್ದಾರೆ.

ಇದೇ ವಿಚಾರಕ್ಕೆ ದೆಹಲಿಯ ಉದ್ಯಮಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನೋಟಿನ ಮೇಲೆ ನಿಷೇಧ ಹೇರಿದ ನಂತ್ರ ಉದ್ಯಮಿ ವೀರೇಂದ್ರ ಕುಮಾರ್ ವ್ಯಾಪಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಅನೇಕ ದಿನಗಳಿಂದ ಬ್ಯಾಂಕ್ ಮುಂದೆ ಕ್ಯೂನಲ್ಲಿ ನಿಲ್ತಾ ಇದ್ದ ವೀರೇಂದ್ರ ಕುಮಾರ್ ಗೆ ಹಣ ಬದಲಾಯಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದೇ ಕಾರಣಕ್ಕೆ ವೀರೇಂದ್ರ ಕುಮಾರ್ ನೇಣು ಬಿಗಿದುಕೊಂಡಿದ್ದಾನೆ.

ವೀರೇಂದ್ರ ಕುಮಾರ್ ಪತ್ನಿ ಗರ್ಭಿಣಿ. ಆರೋಗ್ಯದಲ್ಲಿ ಏರುಪೇರಾಗಿದ್ದು, ಚಿಕಿತ್ಸೆಗೆ ಜಾಸ್ತಿ ಹಣದ ಅವಶ್ಯಕತೆ ಇತ್ತಂತೆ. ನೋಟು ಜಮಾ ಮಾಡಲಾಗದೆ, ಬದಲಾವಣೆ ಮಾಡಲೂ ಆಗದೆ ವೀರೇಂದ್ರ ಡಿಫ್ರೆಶನ್ ಗೆ ಹೋಗಿದ್ದ ಎನ್ನಲಾಗಿದೆ. ಹಾಗಾಗಿ ಈ ಕೆಟ್ಟ ನಿರ್ಧಾರಕ್ಕೆ ಬಂದಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...