alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಲಿ ಟ್ರಿಪ್ ಗಾಗಿ ಇವರುಗಳು ಮಾಡಿದ್ದೇನು ಗೊತ್ತಾ…?

ಜಾಲಿ ಟ್ರಿಪ್ ಮಾಡಲು ಹಣದ ಕೊರತೆ ಎದುರಿಸಿದ ಒಂಬತ್ತು ಗೆಳೆಯರು ಹಿರಿಯ ವೈದ್ಯರನ್ನು ಹತ್ಯೆ ಮಾಡಿ ಸಿಕ್ಕಿಬಿದ್ದಿದ್ದಾರೆ.

ನವದೆಹಲಿಯ ಜಹಂಗೀರ್ ಪುರ್ ನಲ್ಲಿ ಈ ಘಟನೆ ನಡೆದಿದ್ದು, ಆಯುರ್ವೇದ ವೈದ್ಯ ಇಕ್ಬಾಲ್ ಖಾಸಿಮ್ ಹತ್ಯೆಗೀಡಾದವರು. ಮೃತ ದೇಹ ಅವರ ಮನೆಯಲ್ಲಿ ಪತ್ತೆಯಾಗಿದ್ದು, ಆರೋಪಿಗಳು ಮನೆಯಿಂದ 11 ಲಕ್ಷ ಮೌಲ್ಯದ ಆಭರಣ, ನಗದು ದೋಚಿದ್ದು, ತನಿಖೆ ವೇಳೆ ಪತ್ತೆಯಾಗಿದೆ.

ರಿಜ್ವಾನ್, ವಿಶಾಲ್ ರಾವತ್, ಸಂಧ್ಯಾ ರಾವತ್, ರಾಜು ರಾವತ್, ಅಫ್ರೋಜ್, ರಿಜ್ವಾ, ಅಮ್ಮರ್, ಜುವೇನಿಲ್ ಬಂಧಿತರು. ಶಿಮ್ಲಾ ಮತ್ತು ಕಾಶ್ಮೀರ ಪ್ರವಾಸ ಕೈಗೊಳ್ಳಲು ಈ ತಂಡ ನಿರ್ಧರಿಸಿತ್ತು. ಆದರೆ, ಪೋಷಕರು ಹಣ ಕೊಡಲು ನಿರಾಕರಿಸಿದ್ದರು. ಹೀಗಾಗಿ ಹಿರಿಯ ವೈದ್ಯರನ್ನು ಕೊಂದು ಹಣ ದೋಚಿ ಪ್ರವಾಸ ಹೊರಡುವ ಪ್ಲಾನ್ ಮಾಡಿದ್ದರು.

ಒಂಬತ್ತು ಜನರ ಪೈಕಿ ಇಬ್ಬರು ವೈದ್ಯರನ್ನು ಚೆನ್ನಾಗಿ ಬಲ್ಲವರಾಗಿದ್ದರು. ಆ ವೈದ್ಯರನ್ನು ಕೊಲ್ಲಲು ಪೂರ್ವಾಭ್ಯಾಸ ಮಾಡಿದ್ದ ತಂಡ, ಶಿಕ್ಷಕಿಯಾದ ವೈದ್ಯರ ಮಗಳು ಶಾಲೆಗೆ ಹೋಗುವುದನ್ನು ಕಾಯ್ದು ಹತ್ಯೆ ನಡೆಸಿದೆ.

ಮೃತ ದೇಹದ ಮೇಲೆ ಯಾವುದೇ ಗಾಯಗಳು ಕಂಡು ಬಾರದೇ ಇದ್ದರೂ, ಹತ್ಯೆ ಮಾಡಲು ತಂದಿದ್ದ ಆಯುಧ ಮೃತ ದೇಹದ ಸಮೀಪವೇ ಪತ್ತೆಯಾಗಿದೆ.

ಆರಂಭದಲ್ಲಿ ಪೊಲೀಸರು ಅನುಮಾನದ ಮೇಲೆ ವಿಶಾಲ್ ರಾವತ್ ನನ್ನು ವಿಚಾರಣೆಗೊಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳಿಂದ ಸಂಗ್ರಹಿಸಿದ ಮಾಹಿತಿ ಅನುಸಾರ ವೈದ್ಯರ ಮನೆಯಿಂದ ಕಳವು ಮಾಡಿದ್ದ 5.5 ಲಕ್ಷ ರೂ. ಹಣ, ಶೇ.70 ಆಭರಣವನ್ನು ವಶಕ್ಕೆ ಪಡೆಯಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...