alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರು ಕದಿಯಲು ಈತನಿಗಿದ್ದ ಕಾರಣ ಕೇಳಿದ್ರೆ ನಕ್ಕು ಬಿಡ್ತೀರಿ..!

delhi-ncr-police-nabbed-thief-who-used-to-steal-cars-to-sleep-in-acಕಾರಿನಲ್ಲಿ ಎಸಿ ಹಾಕಿಕೊಂಡು ಸುಖವಾಗಿ ಮಲಗಬೇಕೆಂಬ ಕಾರಣಕ್ಕೆ ಕಾರು ಕದಿಯುತ್ತಿದ್ದ ಯುವಕನನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈತನಿಂದ 5 ಹೋಂಡಾ ಸಿಟಿ ಕಾರು ಮತ್ತು 2 ಸ್ಕೂಟಿಯನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಸಫಲರಾಗಿದ್ದಾರೆ.

ರಘುವರಪುರದ 19 ವರ್ಷದ ಅಮೃತ್ ಸಿಂಗ್ ಗೆ ಹೋಂಡಾ ಸಿಟಿ ಕಾರಿನಲ್ಲಿ ಎಸಿ ಹಾಕಿಕೊಂಡು ಮಲಗುವುದೆಂದರೆ ಪಂಚಪ್ರಾಣ. ಮನೆಯಲ್ಲಿ ಬಡತನವಿದ್ದ ಕಾರಣ ಕಾರನ್ನು ಕೊಳ್ಳುವುದು ಈತನಿಗೆ ಕನಸಿನ ಮಾತಾಗಿತ್ತು. ಅಮೃತ್, ತನ್ನ ಆಸೆಯನ್ನು ಈಡೇರಿಸಿಕೊಳ್ಳುವುದಕ್ಕೋಸ್ಕರ ಕಾರನ್ನು ಕದಿಯಲಾರಂಭಿಸಿದ.

ಅಮೃತ್ ಕೇವಲ ಹೋಂಡಾ ಸಿಟಿ ಕಾರನ್ನು ಮಾತ್ರ ಕದಿಯುತ್ತಿದ್ದ. ಕದ್ದ ಕಾರನ್ನು ಒಂದೊಂದಾಗಿ ಬಳಸುತ್ತಿದ್ದ ಅಮೃತ್, ಒಂದೊಂದು ದಿನ ಒಂದೊಂದು ಕಾರಿನಲ್ಲಿ ಎಸಿ ಹಾಕಿಕೊಂಡು ಮಲಗುತ್ತಿದ್ದ ಎನ್ನಲಾಗಿದೆ. ಇದಕ್ಕೂ ಮೊದಲೇ ಈತ 16 ಕಾರುಗಳನ್ನು ಕದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಎಲ್ಲರೂ ಹಣಕ್ಕಾಗಿ ಕಾರನ್ನು ಕದ್ದರೆ ಈತ ಎಸಿ ಹಾಕಿಕೊಂಡು ಮಲಗುವುದಕ್ಕಾಗಿ ಕಾರಿನ ಕಳ್ಳತನ ಮಾಡುತ್ತಿದ್ದ ಎನ್ನುವುದು ಆಶ್ಚರ್ಯದ ಸಂಗತಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...