alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದ ಎರಡು ವಿಮಾನ ನಿಲ್ದಾಣಗಳಿಗೆ ಸಿಕ್ತು ಅಂತಾರಾಷ್ಟ್ರೀಯ ಮನ್ನಣೆ

ಇಂಗ್ಲೆಂಡ್ ಮೂಲದ ಖಾಸಗಿ ಕನ್ಸಲ್ಟೆನ್ಸಿ ನಡೆಸಿದ ಅಂತಾರಾಷ್ಟ್ರೀಯ ಮೆಗಾ ಹಬ್ ಇಂಡೆಕ್ಸ್ 2018ರಲ್ಲಿ ಭಾರತದ ಎರಡು ವಿಮಾನ ನಿಲ್ದಾಣಗಳಿಗೆ ಅಂತಾರಾಷ್ಟ್ರೀಯ ಮನ್ನಣೆ ದೊರೆತಿದೆ. ವಿಶ್ವದ 50 ಅತ್ಯುತ್ತಮ ವಿಮಾನ ನಿಲ್ದಾಣಗಳ ಪೈಕಿ ದೆಹಲಿ ಮತ್ತು ಮುಂಬೈ ವಿಮಾನ ನಿಲ್ದಾಣಗಳಿಗೆ ಕ್ರಮವಾಗಿ 25 ಮತ್ತು 38 ನೇ ಸ್ಥಾನ ಸಿಕ್ಕಿದೆ.

ವಿಶ್ವದ 50 ಅತ್ಯುತ್ತಮ ವಿಮಾನ ನಿಲ್ದಾಣಗಳ ಪೈಕಿ ಇಂಗ್ಲೆಂಡ್ ನ ಲಂಡನ್ ನ ಹೀಥ್ರೂ ವಿಮಾನ ನಿಲ್ದಾಣ ಮೊದಲ ಸ್ಥಾನ ಪಡೆದಿದೆ. ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಿಶ್ವದ ಅತಿ ಕಡಿಮೆ ದರದ ವಿಮಾನ ನಿಲ್ದಾಣಗಳ ಪೈಕಿ ಆರನೇ ಸ್ಥಾನ ಪಡೆದಿದೆ. ಅತಿ ಕಡಿಮೆ ದರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನು ನೀಡುತ್ತಿರೋದಕ್ಕೆ ಹೆಸರು ವಾಸಿಯಾಗಿದೆ.

ರಾಜಧಾನಿಗೆ ತೀರಾ ಸಮೀಪದಲ್ಲಿ ನಿರ್ಮಾವಾಗಿರುವ ವಿಶ್ವದ ಎರಡನೇ ವಿಮಾನ ನಿಲ್ದಾಣ ಅನ್ನೋ ಕೀರ್ತಿಗೂ ದೆಹಲಿ ಏರ್ಪೋರ್ಟ್ ಪಾತ್ರವಾಗಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚು ಜನಮನ್ನಣೆ ಪಡೆಯುತ್ತಿರುವ ದೆಹಲಿ ವಿಮಾನ ನಿಲ್ದಾಣ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಖ್ಯಾತಿಯನ್ನ ಪಡೆಯಲಿದೆ ಅಂತ ಹೇಳ್ತಿದೆ ವರದಿ.

ದೆಹಲಿ ವಿಮಾನ ನಿಲ್ದಾಣದ ಹೊರತಾಗಿ ಏಷ್ಯಾದ ಹಲವು ವಿಮಾನ ನಿಲ್ದಾಣಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಸಿಂಗಾಪುರ ಸೇರಿದಂತೆ ದಕ್ಷಿಣ ಏಷ್ಯಾದ ಇತರೆ ಐದು ವಿಮಾನ ನಿಲ್ದಾಣಗಳು ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...