alex Certify
ಕನ್ನಡ ದುನಿಯಾ       Mobile App
       

Kannada Duniya

ಕದ್ದ ಮೊಬೈಲ್ ನಲ್ಲಿ ಸೆಲ್ಫಿ ತೆಗೆದು ಸಿಕ್ಕಿಬಿದ್ದ…!

ದೆಹಲಿಯಲ್ಲಿ ಕದ್ದ ಮೊಬೈಲ್ ನಲ್ಲಿ ಸೆಲ್ಫಿ ತೆಗೆದು ಕಳ್ಳನೊಬ್ಬ ಸಿಕ್ಕಿಬಿದ್ದಿದ್ದಾನೆ. ಮೊಬೈಲ್ ಕದ್ದ ಕಳ್ಳನ್ಯಾರು ಎಂಬ ವಿಷ್ಯ ಪೊಲೀಸರಿಗೆ ಗೊತ್ತಾಗಿದೆ. ಕಳ್ಳನ ಹುಡುಕಾಟದಲ್ಲಿರುವ ಪೊಲೀಸರು ಸದ್ಯವೇ ಕಳ್ಳನನ್ನು ಬಂಧಿಸುವ ಭರವಸೆ ನೀಡಿದ್ದಾರೆ.

ನವೆಂಬರ್ 2ರಂದು ಶಿಕ್ಷಕಿಯೊಬ್ಬಳ ಮೊಬೈಲ್ ಕಳ್ಳತನವಾಗಿತ್ತು. ಶಾಲೆ ಮುಗಿಸಿ ಮನೆಗೆ ಬರುವ ವೇಳೆ ಬಸ್ ನಲ್ಲಿ ಕಳ್ಳ, ಶಿಕ್ಷಕಿ ಮೊಬೈಲ್ ಕದ್ದಿದ್ದ. ಶಿಕ್ಷಕಿ ಪೊಲೀಸರಿಗೆ ದೂರು ನೀಡದೆ ಮನೆಗೆ ಬಂದಿದ್ದಳು. ಮೊಬೈಲ್ ಕದ್ದ ಕಳ್ಳ ಕದ್ದ ಮೊಬೈಲ್ ನಲ್ಲಿಯೇ ಸೆಲ್ಫಿ ತೆಗೆದಿದ್ದಾನೆ. ಆದ್ರೆ ತಾನು ಮೊಬೈಲ್ ನಲ್ಲಿ ತೆಗೆದ ಫೋಟೋ ಶಿಕ್ಷಕಿ ಗೂಗಲ್ ಡ್ರೈವ್ ಗೆ ಹೋಗಿ ಶಿಕ್ಷಕಿ ಮೇಲ್ ತಲುಪುತ್ತದೆ ಎಂಬ ಮಾಹಿತಿ ಆತನಿಗಿರಲಿಲ್ಲ.

ಮಾರನೇ ದಿನ ಶಿಕ್ಷಕಿ ಗೂಗಲ್ ಡ್ರೈವ್ ಚೆಕ್ ಮಾಡಿದಾಗ ಅಪರಿಚಿತನ ಫೋಟೋ ಕಾಣಿಸಿದೆ. ತಕ್ಷಣ ಶಿಕ್ಷಕಿ ಪೊಲೀಸರಿಗೆ ದೂರು ನೀಡಿದ್ದಾಳೆ. ಫೋಟೋ ತೆಗೆದ ಸ್ಥಳ ಹಾಗೂ ಸಮಯ ಕೂಡ ಗೊತ್ತಾಗಿದೆ. ಜಾಡು ಹಿಡಿದು ಹೊರಟ ಪೊಲೀಸರಿಗೆ ಕಳ್ಳನ ಮನೆ ಹಾಗೂ ಹೆಸರು ಗೊತ್ತಾಗಿದೆ. ಆದ್ರೆ ಕಳ್ಳ ನಾಪತ್ತೆಯಾಗಿದ್ದು ಆತನ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...