alex Certify
ಕನ್ನಡ ದುನಿಯಾ       Mobile App
       

Kannada Duniya

ಗೋಡೆಗೆ ಗುದ್ದಿದೆ ಮೋದಿ ಉದ್ಘಾಟಿಸಬೇಕಿದ್ದ ಮೆಟ್ರೋ

ನವದೆಹಲಿ: ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಇದೇ ಕ್ರಿಸ್ ಮಸ್ ಹಬ್ಬದಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಯಾಗಬೇಕಿದ್ದ ಮೆಟ್ರೋ ಅಪಘಾತಕ್ಕೀಡಾಗಿದೆ.

ದೆಹಲಿ ಮೆಟ್ರೋದ ಮುಂದುವರೆದ ಭಾಗವಾಗಿರುವ ಮೆಜೆಂತಾ ಲೈನ್ ನಲ್ಲಿ ಪರೀಕ್ಷಾರ್ಥ ಸಂಚಾರ ನಡೆಸುತ್ತಿದ್ದ ಮೆಟ್ರೋ ಗೋಡೆಗೆ ಡಿಕ್ಕಿ ಹೊಡೆದಿದೆ.

ಕಾಳಿಂದಿ ಕುಂಜ್ ಡಿಪೋದಲ್ಲಿ ಈ ಘಟನೆ ಸಂಭವಿಸಿದ್ದು, ರೈಲು ಗೋಡೆಯನ್ನು ಗುದ್ದಿಕೊಂಡು ಮುಂದೆ ಸಾಗಿ ನೆಲಕ್ಕೆ ಜಾರಿದೆ. ದೆಹಲಿಯ ಜನಕಪುರಿಯಿಂದ ನೋಯ್ಡಾದವರೆಗೆ ಮೆಜೆಂಟಾ ಮೆಟ್ರೋ ಲೇನ್ ನಿರ್ಮಿಸಲಾಗಿದೆ.

ಬ್ರೇಕ್ ವ್ಯವಸ್ಥೆಯನ್ನು ಪರಿಶೀಲಿಸದೇ ವರ್ಕ್ ಶಾಪ್ ನಿಂದ ರೈಲು ಹೊರ ತೆಗೆದು ಪರೀಕ್ಷಾರ್ಥ ಸಂಚಾರ ನಡೆಸಲಾಗಿದೆ. ಮೆಟ್ರೋ ಗೋಡೆಗೆ ಡಿಕ್ಕಿ ಹೊಡೆದಿದ್ದು, ಘಟನೆ ತನಿಖೆಗೆ ಆದೇಶಿಸಲಾಗಿದೆ ಎಂದು ದೆಹಲಿ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಡಿಸೆಂಬರ್ 25 ರಂದು ಬಟಾನಿಕಲ್ ಗಾರ್ಡನ್ ನ ಕಾಲ್ಕಾಜಿ ಮಂದಿರದಲ್ಲಿ ಪ್ರಧಾನಿ ಮೋದಿ, ಈ ಹೊಸ ಮೆಟ್ರೋ ಮಾರ್ಗಕ್ಕೆ ಹಸಿರು ನಿಶಾನೆ ತೋರಬೇಕಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...