alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರತಿದಿನ 3 ಲಕ್ಷ ಪ್ರಯಾಣಿಕರನ್ನು ಕಳೆದುಕೊಳ್ತಿದೆ ಮೆಟ್ರೋ

ಕಳೆದ ತಿಂಗಳು ದೆಹಲಿ ಮೆಟ್ರೋ ಟಿಕೆಟ್ ದರವನ್ನು ಶೇ.20-50ರಷ್ಟು ಹೆಚ್ಚಳ ಮಾಡಲಾಗಿತ್ತು. ಬೆಲೆ ಏರಿಕೆ ನಂತರ ಮೆಟ್ರೋ ಸವಾರಿ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಪ್ರತಿದಿನ 3 ಲಕ್ಷ ಪ್ರಯಾಣಿಕರನ್ನು ಮೆಟ್ರೋ ಕಳೆದುಕೊಳ್ತಿದೆ.

ಸಪ್ಟೆಂಬರ್ ನಲ್ಲಿ ಮೆಟ್ರೋ ರೈಡ್ಸ್ ಸಂಖ್ಯೆ 27.4 ಲಕ್ಷದಷ್ಟಿತ್ತು. ಆದ್ರೆ ಅಕ್ಟೋಬರ್ ನಲ್ಲಿ ಈ ಸಂಖ್ಯೆ 24.2 ಲಕ್ಷಕ್ಕೆ ಇಳಿಕೆಯಾಗಿದೆ. ಮೆಟ್ರೋ ಸವಾರಿ ಕೂಡ ಶೇ.11ರಷ್ಟು ಕಡಿಮೆಯಾಗಿದೆ. 5 ತಿಂಗಳ ಹಿಂದಷ್ಟೆ ಟಿಕೆಟ್ ದರವನ್ನು ಶೇ.100ರಷ್ಟು ಹೆಚ್ಚಳ ಮಾಡಲಾಗಿತ್ತು.

ಅದರ ಬೆನ್ನಲ್ಲೇ ಮತ್ತೆ ಪ್ರಯಾಣಿಕರಿಗೆ ಬರೆ ಎಳೆದ ಸರ್ಕಾರ, ಪ್ರತಿ ನಿಲ್ದಾಣಕ್ಕೆ ಟಿಕೆಟ್ ದರವನ್ನು 10 ರೂಪಾಯಿಯಷ್ಟು ಏರಿಕೆ ಮಾಡಿದೆ. ದೆಹಲಿಯಲ್ಲಿ ವಾಯು ಮಾಲಿನ್ಯ ಮಿತಿಮೀರಿದ್ದು, ಸಾರ್ವಜನಿಕ ಸಾರಿಗೆ ಕೂಡ ಜಾಗತಿಕ ಮಟ್ಟದಲ್ಲಿ ಚರ್ಚೆಯ ವಸ್ತುವಾಗಿದೆ.

ಸಿಎಂ ಅರವಿಂದ್ ಕೇಜ್ರಿವಾಲ್ ಮೆಟ್ರೋ ಪ್ರಯಾಣ ದರ ಏರಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಪತ್ರ ಬರೆದಿದ್ದರು. ಆದ್ರೂ ಕೇಂದ್ರ ಸರ್ಕಾರ ಅದಕ್ಕೆ ಸೊಪ್ಪು ಹಾಕಿರಲಿಲ್ಲ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...