alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರಾಫಿಕ್ ನಲ್ಲಿ ಹೀಗೂ ಆಗುತ್ತೆ ಹುಷಾರ್…!

phone-theft-facebook_700x431_71502891393

ದೆಹಲಿಯಲ್ಲಿ ಕಾರಿನಲ್ಲಿದ್ದ ಮೊಬೈಲ್ ಯಾವ ರೀತಿ ಕಳವಾಗಿದೆ ಅನ್ನೋದನ್ನು ದಕ್ಷ ಜೈದ್ಕಾ ಎಂಬುವವರು ಫೇಸ್ಬುಕ್ ನಲ್ಲಿ ಶೇರ್ ಮಾಡಿದ್ದಾರೆ. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ದಕ್ಷ ಮಾಡಿರೋ ಪೋಸ್ಟ್ ಅನ್ನು 700ಕ್ಕೂ ಹೆಚ್ಚು ಮಂದಿ ಈಗಾಗ್ಲೇ ಶೇರ್ ಮಾಡಿದ್ದಾರೆ.

ಏಮ್ಸ್ ಆಸ್ಪತ್ರೆಯ ಬಳಿ ಟ್ರಾಫಿಕ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದಾಗ ಫೋನ್ ಕಳವಾಗಿದೆ. ಕಳ್ಳತನದ ದೃಶ್ಯ ಕಾರಿನ ಡ್ಯಾಶ್ ಬೋರ್ಡ್ ನಲ್ಲಿದ್ದ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ಹಾಗಾಗಿ ಟ್ರಾಫಿಕ್ ನಲ್ಲಿ ಸಿಲುಕಿಕೊಂಡಾಗ ಯಾವುದೇ ಕಾರಣಕ್ಕೂ ಕಾರಿನ ಕಿಟಕಿ ತೆರೆಯಬೇಡಿ ಅಂತಾ ಅವರು ಎಚ್ಚರಿಸಿದ್ದಾರೆ.

ದಕ್ಷಾಳ ಸಹೋದರ ಅವಿನಿ ಅಂಬುಜ್ ಶಂಕರ್ ಆಗಸ್ಟ್ 2ರಂದು ಟ್ರಾಫಿಕ್ ನಲ್ಲಿ ಸಿಲುಕಿದ್ರು. ಇಬ್ಬರು ಪುರುಷರು ಅವರ ಕಾರಿನ ಬಳಿಯೇ ಸುತ್ತಾಡುತ್ತಿದ್ರು. ಯಾವುದೋ ವಿಷಯ ತೆಗೆದು ಅಂಬುಜ್ ಅವರ ಗಮನ ಸೆಳೆದಿದ್ದಾರೆ. ಕ್ಷಣಮಾತ್ರದಲ್ಲಿ ಕಾರಿನ ಸೀಟಿನ ಮೇಲಿಟ್ಟಿದ್ದ ಮೊಬೈಲ್ ಎಗರಿಸಿ ಎಸ್ಕೇಪ್ ಆಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...