alex Certify
ಕನ್ನಡ ದುನಿಯಾ       Mobile App
       

Kannada Duniya

ಯುವತಿ ಜೊತೆ ಪರಾರಿಯಾಗಿದ್ದ ವಿವಾಹಿತನ ಹತ್ಯೆ

ಮದುವೆಯಾಗಿ ಮೂವರು ಮಕ್ಕಳಿದ್ದರೂ ದೂರದ ಸಂಬಂಧಿ ಯುವತಿಯನ್ನು ಪ್ರೀತಿಸಿ ಆಕೆಯೊಂದಿಗೆ ಪರಾರಿಯಾಗಿದ್ದ ವ್ಯಕ್ತಿಯನ್ನು ಯುವತಿಯ ಸಹೋದರ ಹಾಗೂ ಆಕೆಯ ಚಿಕ್ಕಪ್ಪ ಹತ್ಯೆ ಮಾಡಿದ್ದಾರಲ್ಲದೇ ಯುವತಿಗೂ ಚಾಕುವಿನಿಂದ ಇರಿದಿದ್ದಾರೆ.

ಪೂರ್ವ ದೆಹಲಿಯ ಅಶೋಕ್ ನಗರದಲ್ಲಿ ಶುಕ್ರವಾರದಂದು ಈ ಘಟನೆ ನಡೆದಿದ್ದು, 30 ವರ್ಷದ ದಿನೇಶ್ ಕುಮಾರ್ ಎಂಬಾತ ನಾಲ್ಕು ದಿನಗಳ ಹಿಂದೆ ತನ್ನ ದೂರದ ಸಂಬಂಧಿ 23 ವರ್ಷದ ಯುವತಿ ಜೊತೆ ಪರಾರಿಯಾಗಿದ್ದ.

ಇವರಿಬ್ಬರು ಇರುವ ಸ್ಥಳದ ಮಾಹಿತಿಯನ್ನು ಪತ್ತೆ ಹಚ್ಚಿದ ಯುವತಿಯ ಸಹೋದರ ಶಂಕರ್ ಹಾಗೂ ಚಿಕ್ಕಪ್ಪ ರಿಂಕು ಇಬ್ಬರನ್ನೂ ಎಳೆತಂದು ಮಯೂರ್ ವಿಹಾರ್ ನ ಫೇಸ್ 1 ಬಳಿ ಚಾಕುವಿನಿಂದ ಇರಿದಿದ್ದಾರೆ. ಬೀಟ್ ಪೊಲೀಸ್ ಓರ್ವರು ಇದನ್ನು ಗಮನಿಸಿದ್ದು, ಸ್ಥಳೀಯರ ನೆರವಿನಿಂದ ಇಬ್ಬರನ್ನೂ ಬಂಧಿಸಿದ್ದಾರೆ.

ದಿನೇಶ್ ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ತೀವ್ರವಾಗಿ ಗಾಯಗೊಂಡಿರುವ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿಯ ವಿವಾಹವನ್ನು ಬೇರೊಬ್ಬನೊಂದಿಗೆ ನಿಶ್ಚಯಿಸಲಾಗಿದ್ದು, ವಿವಾಹಕ್ಕೆ ಸಿದ್ದತೆಗಳೂ ನಡೆದಿದ್ದವೆನ್ನಲಾಗಿದೆ. ಆದರೆ ಈ ವಿವಾಹ ಒಲ್ಲದ ಯುವತಿ ತನಗಾಗಿ ಮಾಡಿಸಿಟ್ಟಿದ ಒಡವೆಗಳೊಂದಿಗೆ ದಿನೇಶ್ ಕುಮಾರ್ ನೊಂದಿಗೆ ಪರಾರಿಯಾಗಿದ್ದಳೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...