alex Certify
ಕನ್ನಡ ದುನಿಯಾ       Mobile App
       

Kannada Duniya

21 ಸಲ ಪತ್ನಿಯನ್ನು ಇರಿದು ಕೊಂದವನಿಗೆ ತಕ್ಕ ಶಾಸ್ತಿ

ನವದೆಹಲಿ: ಸಣ್ಣ ವಿಚಾರಕ್ಕೆ ಜಗಳವಾಡಿ, ಪತ್ನಿಯನ್ನು ಹರಿತವಾದ ಚಾಕುವಿನಿಂದ 21 ಸಲ ಇರಿದು ಹತ್ಯೆ ಮಾಡಿದ್ದ ಆರೋಪಿಗೆ, ದೆಹಲಿ ಹೈಕೋರ್ಟ್ ಜೀವಾವಧಿ ಶಿಕ್ಷೆ ನೀಡಿದೆ.

ದೇವೇಂದರ್ ದಾಸ್ ಎಂಬಾತನೇ ಶಿಕ್ಷೆಗೆ ಒಳಗಾದ ಆರೋಪಿ. 2012 ರ ನವೆಂಬರ್ 1 ರಂದು ದಂಪತಿ ನಡುವೆ ಜಗಳವಾಗಿದ್ದು, ಅದು ವಿಕೋಪಕ್ಕೆ ತಿರಗಿದೆ. ಹರಿತವಾದ ಚಾಕುವಿನಿಂದ ಪತ್ನಿಯನ್ನು ಇರಿದು, ಇಟ್ಟಿಗೆ ಹಾಗೂ ಚಾಕುವಿನಿಂದ ತಲೆಗೆ ಹೊಡೆದು ದೇವೇಂದರ್ ದಾಸ್ ಹತ್ಯೆ ಮಾಡಿದ್ದ.

ಆತ ಕೆಲಸ ಮಾಡುತ್ತಿದ್ದ ಜಮೀನಿನ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸ್ಥಳೀಯ ನ್ಯಾಯಾಲಯ ದೇವೇಂದರ್ ದಾಸ್ ಗೆ ಶಿಕ್ಷೆ ವಿಧಿಸಿತ್ತು.

ಇದನ್ನು ಹೈಕೋರ್ಟ್ ನಲ್ಲಿ ದಾಸ್ ಪ್ರಶ್ನಿಸಿದ್ದ. ಬೇಕೆಂದೇ ಕೊಲೆ ಮಾಡಿಲ್ಲವೆಂದು ಹೇಳಿದ್ದ. ಆದರೆ, ಆತನ ಮನವಿಯನ್ನು ತಿರಸ್ಕರಿಸದ ಕೋರ್ಟ್, ಯಾವುದೇ ಪ್ರಚೋದನೆ ಇಲ್ಲದೇ ಕ್ರೂರವಾಗಿ ಪತ್ನಿಯನ್ನು ಹತ್ಯೆ ಮಾಡಿರುವುದನ್ನು ಸಹಿಸಲು ಆಗದು ಎಂದು ಹೇಳಿದೆ. ಕೆಳ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...