alex Certify
ಕನ್ನಡ ದುನಿಯಾ       Mobile App
       

Kannada Duniya

ದುರಂತಕ್ಕೆ ಕಾರಣವಾಯ್ತು ಹಾಡಿನ ಸೌಂಡ್

fitness

ಕೆಲವರಿಗೆ ಜೋರಾಗಿ ಸೌಂಡ್ ಇಟ್ಟುಕೊಂಡು ಹಾಡುವ ಕೇಳುವ ಖಯಾಲಿ. ಬೇರೆಯವರಿಗೆ ಇದರಿಂದ ತೊಂದರೆಯಾಗುತ್ತದೆ ಎಂಬ ಕನಿಷ್ಟ ಸೌಜನ್ಯ ಕೂಡ ಇರುವುದಿಲ್ಲ. ಹೀಗೆ ಜೋರಾಗಿ ಸೌಂಡ್ ಹಾಕಿಕೊಂಡು ಏನೇನು ಅವಾಂತರವಾಗಿದೆ ಎಂಬುದನ್ನು ನೀವೇ ನೋಡಿ.

ನವದೆಹಲಿಯ ಇಂಡಿಯನ್ ಫಿಟ್ ನೆಸ್ ಸೆಂಟರ್ ತರಬೇತುದಾರ ರಿಂಕೂ ತನ್ನ ಸ್ನೇಹಿತನೊಂದಿಗೆ ಸೇರಿ ಜೋರಾಗಿ ಹಾಡು ಹಾಕಿದ್ದಾನೆ. ಫಿಟ್ ನೆಸ್ ಸೆಂಟರ್ ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಇಟ್ಟು ಹಾಡು ಹಾಕಿದ್ದರಿಂದ ಅಕ್ಕಪಕ್ಕದ ನಿವಾಸಿಗಳು ಬೇಸತ್ತು ಹೋಗಿದ್ದಾರೆ. ಜನ ಪ್ರಶ್ನಿಸಿದರೂ ರಿಂಕೂ ಕೇರ್ ಮಾಡಿಲ್ಲ. ಕೊನೆಗೆ ಹರ್ ದೀಪ್ ಸಿಂಗ್ ಎಂಬುವವರು ಹಾಡಿನ ಶಬ್ದ ಕಿವಿಡುಗಚ್ಚುವಂತಿದ್ದು, ಇದರಿಂದ ಭಾರೀ ತೊಂದರೆಯಾಗಿದೆ. ಸೌಂಡ್ ಕಡಿಮೆ ಮಾಡಿ ಎಂದು ಏರಿದ ದನಿಯಲ್ಲಿ ತಾಕೀತು ಮಾಡಿದ್ದಾರೆ.

ಕೆಲಸ ಸಮಯದ ನಂತರ ರಿಂಕೂ ತನ್ನ ಸ್ನೇಹಿತನೊಂದಿಗೆ ಹರದೀಪ್ ಸಿಂಗ್ ಮನೆಗೆ ಬಂದು ಅವರ ಮೇಲೆ ಗುಂಡು ಹಾರಿಸಿದ್ದಾನೆ. ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ, ಈ ವೇಳೆಗೆ ಅವರು ಮೃತಪಟ್ಟಿದ್ದರು. ರಿಂಕೂ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...